ಕರ್ನಾಟಕ

karnataka

ಗಡಿ ನಿಯಂತ್ರಣ ರೇಖೆ

ETV Bharat / videos

ಜಮ್ಮು ಮತ್ತು ಕಾಶ್ಮೀರ: ಗಡಿ ನಿಯಂತ್ರಣ ರೇಖೆ ದಾಟುತ್ತಿದ್ದ ಶಂಕಿತ ಮಹಿಳೆಯನ್ನು ಗುಂಡಿಕ್ಕಿ ಕೊಂದ ಭದ್ರತಾ ಪಡೆ - ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ

By

Published : May 16, 2023, 8:57 AM IST

ಶ್ರೀನಗರ(ಜಮ್ಮುಮತ್ತುಕಾಶ್ಮೀರ): ಎಷ್ಟೇ ಎಚ್ಚೆರಿಕೆ  ನೀಡಿದರೂ ಪಾಕ್​ ಉಗ್ರರು ಮತ್ತೆ ಮತ್ತೆ ಭಾರತದ ಗಡಿ ದಾಟಿ ಬರುವ ಸಾಹಸ ಮಾಡುತ್ತಲೇ ಇದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಂತೂ ಉಗ್ರರ ಹಾವಳಿ ಹೆಚ್ಚಾಗುತ್ತಲೇ ಇದೆ. ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು ಅಪರಿಚಿತ ಮಹಿಳೆಯೊಬ್ಬಳು ದಾಟಿದ್ದು, ಪಾಕ್ ನುಸುಳುಕೋರಳೆಂದು ಶಂಕಿಸಿ ಅವರನ್ನು ಭಾರತ ಭದ್ರತಾ ಪಡೆಗಳು ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ:ನೀಲಕಂಠ ಪರ್ವತದಲ್ಲಿ ಹಿಮಪಾತ.. ಹಿಮರಾಶಿಯ ದೃಶ್ಯ ಸೆರೆ

ಈ ಅಪರಿಚಿತ ಶಂಕಿತ ಮಹಿಳೆ ಬಾರಾಮುಲ್ಲಾ ಜಿಲ್ಲೆಯ ಕಮಲಕೋಟೆ ಪ್ರದೇಶದಲ್ಲಿ ನಿಯಂತ್ರಣ ರೇಖೆ ದಾಟಿ ಗಡಿ ಬೇಲಿಯ ಸಮೀಪ ಬರುತ್ತಿದ್ದಳು. ಆಕೆಗೆ ಸೈನಿಕರು ಎಚ್ಚರಿಕೆ ನೀಡಿದರೂ  ಮಹಿಳೆ ಗಮನ ಹರಿಸಲಿಲ್ಲ. ಇದರಿಂದಾಗಿ ಭದ್ರತಾ ಪಡೆಗಳು ಆಕೆಯ ಮೇಲೆ ಬಂದೂಕಾಸ್ತ್ರ ಪ್ರಯೋಗಿಸಿವೆ . ಇದರಿಂದಾಗಿ ಮಹಿಳೆ ಮೃತಪಟ್ಟಿದ್ದಾಳೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಧಗಧಗಿಸುವ ಸೂರ್ಯನ ಪ್ರತಾಪಕ್ಕೆ ನಲುಗಿದ ಜನ.. ತೆಲುಗು ರಾಜ್ಯಗಳಲ್ಲಿ ಆರು ಜನ ಸಾವು!

ABOUT THE AUTHOR

...view details