ಕರ್ನಾಟಕ

karnataka

ಸೂರ್ಯ ನಮಸ್ಕಾರ

ETV Bharat / videos

ಆದಿತ್ಯ ಎಲ್ - 1 ಉಡಾವಣೆಗೆ ಕ್ಷಣಗಣನೆ: ಧಾರವಾಡದಲ್ಲಿ ಸೂರ್ಯ ನಮಸ್ಕಾರ ಮೂಲಕ ಹಾರೈಕೆ-ವಿಡಿಯೋ - Surya Namaskar wishes for launch of Aditya L1

By ETV Bharat Karnataka Team

Published : Sep 2, 2023, 11:01 AM IST

ಧಾರವಾಡ:ಇಸ್ರೋದಿಂದ ಆದಿತ್ಯ ಎಲ್ - 1 ಉಡಾವಣೆಗೆ ಕ್ಷಣಗಣನೆ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಇಸ್ರೋಗೆ ಶುಭಕೋರಿ ಸೂರ್ಯ ನಮಸ್ಕಾರ ಮಾಡಲಾಯಿತು. ನಗರದ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜನೆ ಮಾಡಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿಕೊಂಡು ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು. ಸೂರ್ಯ ನಮಸ್ಕಾರದ ಬೀಜ ಮಂತ್ರ ಜಪಿಸುತ್ತ ಆಸನ ಪ್ರದರ್ಶಿಸಿದರು. ವಿವಿಧ ಸಂಘ ಸಂಸ್ಥೆಗಳಿಂದ ಆಯೋಜಿಸಲಾಗಿತ್ತು. 

ಆದಿತ್ಯ ಎಲ್ 1 ಉಡಾವಣೆಗೆ ಇಂದಾಗಲಿದ್ದು ಪುಟ್ಟ ನಾಟಕದ ಮೂಲಕ ಪುಟಾಣಿಗಳಿಂದ ಶುಭ ಹಾರೈಸಿದ್ದಾರೆ. ಜತೆಗೆ ಚಂದ್ರಯಾನ 3 ಕುರಿತಾದ ನಾಟಕದ ಮೂಲಕ ಇಸ್ರೋಗೆ ಶುಭ ಹಾರೈಸಿದರು. ಧಾರವಾಡದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ ವಿಭಾಗದ ಮಕ್ಕಳು ನಾಟಕ ಪ್ರದರ್ಶಿಸಿದ್ದಾರೆ. ನಗರದ ಮೃತ್ಯುಂಜಯ ನಗರ ಬಡಾವಣೆಯಲ್ಲಿರುವ ಶಾಲೆಯಲ್ಲಿ ಭೂಮಿ, ಚಂದ್ರ, ವಿಕ್ರಮ, ಪ್ರಗ್ಯಾನ್ ವೇಷ ತೊಟ್ಟು ಮಕ್ಕಳ ಅಭಿನಯಿಸಿದರು. 

ಆದಿತ್ಯ ಉಪಗ್ರಹ ಯಶಸ್ಸಿಗೆ ಹಾರೈಸಿ ಯೋಗಪಟುಗಳಿಂದ ಸೂರ್ಯ ನಮಸ್ಕಾರ:ಚಂದ್ರನ ಬಳಿಕ ಈಗ ಇಸ್ರೋ ಸೂರ್ಯ ಅಧ್ಯಯನ ನಡೆಸಲು ಆದಿತ್ಯ-L1 ಉಪಗ್ರಹ ಉಡಾವಣೆ ಮಾಡುತ್ತಿದ್ದು ಈ ಸಂಶೋಧನಾ ಕಾರ್ಯ ಯಶಸ್ವಿಯಾಗಲೆಂದು ಚಾಮರಾಜನಗರದಲ್ಲಿ ಯೋಗಪಟುಗಳು ಸೂರ್ಯ ನಮಸ್ಕಾರ ಮಾಡಿ ಹಾರೈಸಿದ್ದಾರೆ. 

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಚಾಮರಾಜನಗರದಲ್ಲಿ ಭಾರತಾಂಬೆ ಭಾವಚಿತ್ರ ಹಾಗೂ ಆದಿತ್ಯ ಉಪಗ್ರಹದ ಪ್ರತಿಕೃತಿಗೆ ಪುಷ್ಪಾರ್ಚನೆ ಸಲ್ಲಿಸಿ 108 ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದಿದ್ದಾರೆ. ಆದಿತ್ಯL1 ಉಪಗ್ರಹ ಯಶಸ್ವಿ ಉಡ್ಡಯನಗೊಂಡು ಸೂರ್ಯನನತ್ತ ಅಡೆತಡೆಗಳಿಲ್ಲದೇ ಪ್ರಯಾಣ ಬೆಳೆಸಿ ಸಂಶೋಧನೆಗೆ ಜಯವಾಗಲಿ ಎಂದು ಸೂರ್ಯನಿಗೆ ನಮಸ್ಕರಿಸಿದ್ದಾರೆ.

ಇದನ್ನೂ ಓದಿ:ಬಾನಂಗಳ ಪ್ರಯಾಣಕ್ಕೆ ಕ್ಷಣಗಣನೆ.. ಆದಿತ್ಯ ಎಲ್1 ಪ್ರಾಜೆಕ್ಟ್​ಗೆ ಎಲ್ಲವೂ ಇವರೇ.. ಅಂದಹಾಗೆ ಯಾರಿವರು?

ABOUT THE AUTHOR

...view details