ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸುಧಾಮೂರ್ತಿ.. VIDEO - ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ
ಕೋಲಾರ: ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಇಂದು ಸಂಬಂಧಿಕರೊಬ್ಬರ ಮದುವೆ ಮುಗಿಸಿ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಪ್ರತಿ ಬಾರಿ ಕೋಲಾರಕ್ಕೆ ಭೇಟಿ ಕೊಟ್ಟಾಗ ಇಲ್ಲಿಗೆ ಬಂದು ಹೋಗುತ್ತೇನೆ. ಅದರಂತೆ ಇಂದು ದೇವಿಯ ದರ್ಶನ ಪಡೆದಿದ್ದೇನೆ. ಬಹಳ ನೆಮ್ಮದಿಯಾಯಿತು. ಬಹಳ ಚೆನ್ನಾಗಿ ದೇವಾಲಯವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದರು. ರಿಷಿ ಸುನಕ್ ಬಗ್ಗೆ ಮಾತನಾಡುತ್ತಾ, ಅವರಿಗೆ ನಮ್ಮ ಆಶೀರ್ವಾದ ಇದ್ದೆ ಇರುತ್ತದೆ ಎಂದರು. ಇನ್ನು ದೇವಸ್ಥಾನದ ಬಳಿ ಸುಧಾ ಮೂರ್ತಿ ಅವರನ್ನು ಕಂಡ ಸ್ಥಳೀಯರು ಗೌರದಿಂದ ನಮಸ್ಕರಿಸಿ, ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಕೋಲಾರಮ್ಮ ದರ್ಶನ ಬಳಿಕ ಬೆಂಗಳೂರಿನ ಕಡೆ ಸುಧಾ ಮೂರ್ತಿ ಪ್ರಯಾಣ ಬೆಳೆಸಿದರು.
Last Updated : Feb 3, 2023, 8:30 PM IST