'ಚಂದಮಾಮಾ'ಗೆ ರಕ್ಷಾ ಬಂಧನದ ಶುಭಾಶಯಗಳು: ಮರಳು ಕಲೆಯಲ್ಲಿ ಅರಳಿದ ಭೂಮಿ, ಚಂದ್ರ, ರಾಖಿ ಕಲಾಕೃತಿ - ಒಡಿಶಾ ನ್ಯೂಸ್
Published : Aug 30, 2023, 8:54 AM IST
ಪುರಿ(ಒಡಿಶಾ):ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೇ ರಕ್ಷಾ ಬಂಧನ. ಇಂದು ದೇಶದಲ್ಲಿ 'ರಕ್ಷಾ ಬಂಧನ'ದ ಸಂಭ್ರಮ ಮನೆ ಮಾಡಿದೆ. ಈ ನಡುವೆ ಮರಳು ಕಲಾವಿದ ಪದ್ಮಶ್ರೀ ಸುದರ್ಶನ್ ಪಟ್ನಾಯಕ್ ಅವರು ಪುರಿ ನೀಲಾದ್ರಿ ಕಡಲ ತೀರದಲ್ಲಿ ಸುಂದರವಾದ ಮರಳು ಶಿಲ್ಪ ರಚಿಸಿ ಗಮನ ಸೆಳೆದಿದ್ದಾರೆ.
'Happy Raksha Bandhan To Chanda Mama'. ಈ ವರ್ಷ ರಕ್ಷಾ ಬಂಧನ ಹಬ್ಬಕ್ಕೆ ಅವರ ಮರಳು ಕಲೆ ವಿಶೇಷ ಸಂದೇಶವನ್ನು ನೀಡಿದೆ. ಮರಳು ಕಲೆಯಲ್ಲಿ ಭೂಮಿ ತಾಯಿ, ಚಂದ್ರ ಹಾಗೂ ರಾಖಿ ಕಲಾಕೃತಿ ರಚಿಸಿದ್ದಾರೆ. ನವೀನ ವಿನ್ಯಾಸದಲ್ಲಿ 'ಚಂದಮಾಮಾಗೆ ರಕ್ಷಾ ಬಂಧನದ ಶುಭಾಶಯಗಳು' ಎಂದು ಬರೆದಿದ್ದಾರೆ. ಚಂದ್ರಯಾನದ ಯಶಸ್ಸಿನ ನಂತರ, ಮೊದಲ ಬಾರಿಗೆ ಭೂಮಾತೆ ಚಂದ್ರನಿಗೆ ರಾಖಿ ಕಟ್ಟುತ್ತಿರುವ ದೃಶ್ಯವನ್ನು ಸುದರ್ಶನ್ ಅವರು ಮರಳು ಕಲೆಯಲ್ಲಿ ವಿಭಿನ್ನ ಶೈಲಿಯಲ್ಲಿ ಚಿತ್ರಿಸಿದ್ದಾರೆ.
ರಕ್ಷಾ ಬಂಧನದ ಬಗ್ಗೆ ಒದಿಷ್ಟು.. ರಾಖಿ ಎಂದೂ ಕರೆಯಲ್ಪಡುವ ರಕ್ಷಾ ಬಂಧನ ಭಾರತದಾದ್ಯಂತ ಆಚರಿಸಲಾಗುವ ಹಬ್ಬ. ಸಹೋದರಿಯರು ತಮ್ಮ ಸಹೋದರರ ಕೈಗಳಿಗೆ ರಾಖಿ ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಕಟ್ಟುತ್ತಾರೆ ಮತ್ತು ಅವರಿಗೆ ದೀರ್ಘಾಯುಷ್ಯ, ಸಂತೋಷ ಮತ್ತು ಯಶಸ್ಸನ್ನು ಬಯಸುತ್ತಾರೆ. ಬದಲಾಗಿ, ಸಹೋದರರು ತಮ್ಮ ಜೀವನದ ಉದ್ದಕ್ಕೂ ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ.
ಪ್ರೀತಿಯ ಬಂಧವನ್ನು ದಾರದ ಮೂಲಕ ಬೆಸೆಯುವ ಹಬ್ಬವೇ ರಕ್ಷಾ ಬಂಧನ. ಈ ಬಾರಿ ರಕ್ಷಾ ಬಂಧನವನ್ನು ಆಗಸ್ಟ್ 31 ರಂದು ಆಚರಿಸಲಾಗುತ್ತಿದೆ. ಇದು ಸಹೋದರ - ಸಹೋದರಿ ನಡುವಿನ ಬಾಂಧವ್ಯ ಹಾಗೂ ಪ್ರೀತಿಯನ್ನು ಸಾರುವ ಸಂಭ್ರಮದ ದಿನ. ಈ ದಿನದಂದು ಎಲ್ಲ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು.
ಇದನ್ನೂ ಓದಿ:ರಕ್ಷಾಬಂಧನಕ್ಕೆ ಸಹೋದರಿಯಿಂದ ವಿಶೇಷ ಉಡುಗೊರೆ : ಆಸ್ಪತ್ರೆ ಸೇರಿದ ಅಣ್ಣನಿಗೆ ಕಿಡ್ನಿ ದಾನ ಮಾಡಿದ್ಲು ತಂಗಿ