ಗಾಯದಿಂದ ಬಳಲುತ್ತಿದ್ದ ಹಾವಿಗೆ ಶಸ್ತ್ರಚಿಕಿತ್ಸೆ: ಉರಗನಿಗೆ ಮರುಜನ್ಮ ನೀಡಿದ ಪ್ರಾಣಿಪ್ರಿಯ - ಧಾರವಾಡ ಹಾವಿಗೆ ಶಸ್ತ್ರಚಿಕಿತ್ಸೆ ವಿಡಿಯೋ
ಧಾರವಾಡ: ಗಾಯದಿಂದ ಬಳಲುತ್ತಿದ್ದ ಹಾವಿಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಮರುಜನ್ಮ ನೀಡಿದ ಘಟನೆಗೆ ಧಾರವಾಡ ಸಾಕ್ಷಿಯಾಗಿದೆ. ಪ್ರಾಣಿಪ್ರಿಯ ಸೋಮಶೇಖರ್ ಅವರು ಹಳಿಯಾಳ ರಸ್ತೆಯ ಬಳಿ ಗಾಯದಿಂದ ಬಳಲುತ್ತಿದ್ದ ಹಾವನ್ನು ರಕ್ಷಣೆ ಮಾಡಿದ್ದರು. ಬಳಿಕ ಕೃವಿವಿ ವೈದ್ಯರ ಬಳಿ ಹೋಗಿ ತೋರಿಸಿದಾಗ ಹಾವಿನ ತಲೆ ಮೇಲೆ ಟ್ಯೂಮರ್ ಆಕಾರದ ಗಂಟು ಬಂದು ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿದೆ. ಕೂಡಲೇ ವೈದ್ಯ ಡಾ.ಅನೀಲ್ ಪಾಟೀಲ್ ಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಮರುಜನ್ಮ ನೀಡಿದ್ದಾರೆ.
Last Updated : Feb 3, 2023, 8:37 PM IST