ಕರ್ನಾಟಕ

karnataka

ETV Bharat / videos

ಕೋಲಾರದಲ್ಲಿ ಧಾರಾಕಾರ ಮಳೆ: ನೀರಿನಲ್ಲೇ ಕುಳಿತು ಪಾಠ ಕೇಳುತ್ತಿರುವ ಮಕ್ಕಳು - ಕೋಲಾರದಲ್ಲಿ ಧಾರಾಕಾರ ಮಳೆಯಿಂದ ನೀರಿನಲ್ಲಿ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

By

Published : Aug 2, 2022, 8:12 PM IST

Updated : Feb 3, 2023, 8:25 PM IST

ಕೋಲಾರ: ಕಳೆದ ನಾಲ್ಕು ದಿನದಿಂದ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ನಗರದ ಕುರುಬರಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲಾ ವಿದ್ಯಾರ್ಥಿಗಳು ಮಳೆ ನೀರಿನಲ್ಲಿಯೇ ಕುಳಿತು ಪಾಠ ಕೇಳುತ್ತಿದ್ದಾರೆ. ಶಾಲೆಯಲ್ಲಿ 67 ಮಕ್ಕಳಿದ್ದು 6 ಕೊಠಡಿಗಳ ಪೈಕಿ ಎರಡು ಮಾತ್ರ ಸುಸಜ್ಜಿತವಾಗಿವೆ. ಉಳಿದ ನಾಲ್ಕು ಕೊಠಡಿಗಳು ಶಿಥಿಲವಾಗಿದ್ದು, ಮಕ್ಕಳು ಕುಳಿತು ಪಾಠ ಕೇಳಲು ಸ್ಥಳವಿಲ್ಲ. ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.
Last Updated : Feb 3, 2023, 8:25 PM IST

ABOUT THE AUTHOR

...view details