ಮಳೆಯಲ್ಲಿ ಟಪ್ಪಾಂಗುಚ್ಚಿ ಡ್ಯಾನ್ಸ್.. ಸೀರೆಯುಟ್ಟು ಕುಣಿದು ಕುಪ್ಪಳಿಸಿದ ವಿದ್ಯಾರ್ಥಿನಿಯರು! - ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು
ಚಾಮರಾಜನಗರ: ರಾಜ್ಯದಲ್ಲಿ ಮಳೆ ನಿಧಾನವಾಗಿ ಚುರುಕು ಪಡೆಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಎಡ ಬಿಡದೇ ಮಳೆ ಸುರಿಯುತ್ತಿದೆ. ಒಂದೆಡೆ ಅಪಾಯದ ಆತಂಕವಿದ್ದರೂ, ಬೇಸಿಗೆಯ ಬಿಸಿಗೆ ಹೈರಾಣಾಗಿದ್ದ ಜನರು ಮಳೆರಾಯನ ಆಗಮನದಿಂದ ಸಂತೋಷವಾಗಿದ್ದಾರೆ. ಅದರಲ್ಲೂ ಈ ತುಂತುರು ಮಳೆ ನಿಧಾನವಾಗಿ ಜಿನುಗುತ್ತಿದ್ದರಂತೂ ಮನಸ್ಸುಗಳಿಗೆ ಆಕಾಶದಲ್ಲಿ ತೇಲಾಡಿದಷ್ಟು ಸಂತೋಷ. ಹಾಗೆಯೇ ಇಲ್ಲೊಂದು ವಿದ್ಯಾರ್ಥಿನಿಯರ ತಂಡ ತುಂತುರು ಮಳೆಯಲ್ಲಿ ಮೈಮರೆತು ಕುಣಿದು ಕುಪ್ಪಳಿಸಿದೆ.
ಸುರಿಯುತ್ತಿದ್ದ ತುಂತುರು ಮಳೆಯನ್ನು ಕಂಡ ಸೀರೆಯುಟ್ಟಿದ್ದ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದ ಘಟನೆ ಚಾಮರಾಜನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸಂಜೆ ನಡೆದಿದೆ. ಇಂದು ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಭ್ರಮ ಪ್ರಯುಕ್ತ ಸ್ಯಾರಿ ಡೇ ಕಾರ್ಯಕ್ರಮ ಆಯೋಜನೆಯಾಗಿತ್ತು. ಈ ವೇಳೆ ತುಂತುರು ಮಳೆ ಬೀಳುವುದನ್ನು ಕಂಡ ವಿದ್ಯಾರ್ಥಿನಿಯರು ಸುಂಟರಗಾಳಿ- ಸುಂಟರಗಾಳಿ ಎಂಬ ಹಾಡಿಗೆ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಸೀರೆ ಉಟ್ಟು ದಿಗ್ಗಜರು ಚಿತ್ರದ ಓ ಗೆಳೆಯ ಎಂಬ ಹಾಡಿಗೆ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ಇದನ್ನೂ ನೋಡಿ:ಮಲೆನಾಡು ಭಾಗದಲ್ಲಿ ಮಳೆ, ತುಂಗಭದ್ರಾ ನದಿಗೆ ಬಂತು ಜೀವಕಳೆ...!