Watch... ಬೇರೆಡೆ ವರ್ಗಾವಣೆಗೊಂಡ ಶಿಕ್ಷಕನಿಗೆ ಕಣ್ಣೀರ ವಿದಾಯ ಹೇಳಿದ ವಿದ್ಯಾರ್ಥಿಗಳು - ಚಿತ್ರಕಲಾ ಶಿಕ್ಷಕನಾಗಿ ಸಲೀಂ ಕರ್ತವ್ಯ
ಚಿಕ್ಕಮಗಳೂರು:ಬೇರೆ ಶಾಲೆಗೆ ವರ್ಗಾವಣೆಗೊಂಡ ಚಿತ್ರಕಲಾ ಶಿಕ್ಷಕನಿಗೆ ಭಾವ ಪೂರ್ಣವಾಗಿ ಶಾಲೆಯ ಮಕ್ಕಳು ಕಣ್ಣೀರು ಹಾಕುವುದರ ಮೂಲಕ ಬೀಳ್ಕೊಡುಗೆ ಕೊಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ವರ್ಗಾವಣೆಗೊಂಡ ಶಿಕ್ಷಕನಿಗೆ ಶಾಲೆಯ ನೂರಾರು ವಿದ್ಯಾರ್ಥಿಗಳು ಶಿಕ್ಷಕನ ಕಾಲು ಮುಟ್ಟಿ ನಮಸ್ಕರಿಸಿ, ಕಣ್ಣೀರು ಹಾಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಶಿಕ್ಷಕ ಸಲೀಂ ಜಾವೇದ್ ವರ್ಗಾವಣೆಗೆ ನೊಂದು ಶಾಲೆಯ ಮಕ್ಕಳು ಕಣ್ಣೀರು ಹಾಕಿದ್ದು, ಚಿಕ್ಕಮಗಳೂರು ಜಿಲ್ಲೆಯ
ಕಳಸ ತಾಲೂಕಿನ ಸಂಸೆ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಮಕ್ಕಳ ಜೊತೆ ಶಾಲೆಯ ಇತರ ಶಿಕ್ಷಕರು ಸಹ ಕಣ್ಣೀರು ಹಾಕಿದ್ದು, ಮಕ್ಕಳು, ಶಿಕ್ಷಕರ ಪ್ರೀತಿ ಕಂಡು ಸಲೀಂ ಜಾವೇದ್ ಕೂಡ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಸಂಸೆಯಿಂದ ಎನ್ ಆರ್ ಪುರ ತಾಲೂಕಿನ ಮಾಗುಂಡಿ ಗ್ರಾಮಕ್ಕೆ ಸಲೀಂ ವರ್ಗಾವಣೆಗೊಂಡಿದ್ದು,12 ವರ್ಷಗಳಿಂದ ಸಂಸೆ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸಲೀಂ ಕರ್ತವ್ಯ ನಿರ್ವಹಿಸಿದ್ದರು. ಈಗ ಬೇರೆ ಕಡೆ ಹೋಗುವುದಕ್ಕೆ ಅವರು ತಯಾರಿ ನಡೆಸಿದ್ದು, ಈ ಘಟನೆಯನ್ನು ನೆನೆದು ಮಕ್ಕಳು ಹಾಗೂ ಶಾಲೆಯ ಇತರ ಶಿಕ್ಷಕರು ಕಣ್ಣೀರು ಹಾಕಿದ್ದಾರೆ.
ಶಾಲೆ ಹಾಗೂ ಶಾಲಾ ಮಕ್ಕಳ ಜೊತೆ ಯಾವ ರೀತಿ ಅವಿನಾಭಾವ ಸಂಬಂಧ ಹೊಂದಿದ್ದರು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಯಿತು. ಶಾಲೆಯ ಪ್ರತಿಯೊಬ್ಬ ಮಕ್ಕಳು ಸಾಲಾಗಿ ನಿಂತು ಅವರ ಆಶೀರ್ವಾದವನ್ನು ಪಡೆದು ಹೂಗುಚ್ಛವನ್ನು ನೀಡುವುದರ ಮೂಲಕ ಅವರಿಗೆ ಬೀಳ್ಕೊಡುಗೆ ನೀಡಿದರು. ಅಲ್ಲದೇ ಸಲೀಂ ಶಾಲೆಯ ಪ್ರತಿಯೊಬ್ಬ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು.
ಇದನ್ನೂ ಓದಿ:Emotional Farewell: ವರ್ಗಾವಣೆಗೊಂಡ ನೆಚ್ಚಿನ ಶಿಕ್ಷಕಿಗೆ ವಿದ್ಯಾರ್ಥಿಗಳ ಕಣ್ಣೀರಿನ ವಿದಾಯ