Watch.. ವಾಹನದ ಹಿಂದೆ ಬೆನ್ನಟ್ಟಿದ ನಾಯಿಗಳು, ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದ ವಾಹನ - ಈಟಿವಿ ಭಾರತ ಕನ್ನಡ
ಬೆರ್ಹಾಂಪುರ (ಒಡಿಶಾ): ಇಲ್ಲಿಯ ಗಂಜಾಂನ ಬ್ರಹ್ಮಪುರ ನಗರದ ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಮಾರ್ಗವಾಗಿ ರಸ್ತೆ ಮೇಲೆ ತೆರಳುವ ಜನರ ಮೇಲೆ ನಾಯಿಗಳು ದಾಳಿ ನಡೆಸುತ್ತಲೇ ಇರುತ್ತವೆ. ಇದರಿಂದ ವಾಹನ ಸವಾರರು, ಮಕ್ಕಳು ಸೇರಿದಂತೆ ವೃದ್ಧರು ಈ ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ. ನಿನ್ನೆ ದಿನ ಇದೇ ರಸ್ತೆಯಲ್ಲಿ ಇಬ್ಬರು ಮಹಿಳೆಯರು ಸೇರಿ ಓರ್ವ ಬಾಲಕ ವಾಹನದಲ್ಲಿ ತೆರಳುತ್ತಿದ್ದಾಗ ನಾಯಿಗಳು ಬೆನ್ನಟ್ಟಿವೆ. ಗಾಬರಿಗೊಂಡ ಮಹಿಳೆ ನಾಯಿಗಳಿಂದ ತಪ್ಪಿಸಿಕೊಳ್ಳಲು ವಾಹನವನ್ನು ವೇಗವಾಗಿ ಚಲಾಯಿಸಿದ್ದಾರೆ. ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದಲ್ಲಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಸುಪ್ರಿಯಾ, ಸುಸ್ಮಿತಾ ಮತ್ತು ಅವರ ಪುತ್ರ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ, ಗಾಂಧಿನಗರ ಪ್ರದೇಶದ ಇಬ್ಬರು ಸಹೋದರಿಯರು ಮತ್ತು ಬಾಲಕ ಇಲ್ಲಿಯ ನೀಲಗಕೇಶ್ವರ ದೇವಸ್ಥಾನಕ್ಕೆ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ, ಬೀದಿ ನಾಯಿಗಳು ಅವರನ್ನು ಹಿಂಬಾಲಿಸಿವೆ ಎಂದು ಹೇಳಲಾಗಿದೆ. ಘಟನೆಯ ದೃಶ್ಯ ಸಿಸಿಟಿಯಲ್ಲಿ ಸೆರಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಒಂದೇ ದಿನ 16 ಜನರ ಮೇಲೆ ಬೀದಿ ನಾಯಿ ದಾಳಿ: ಭಯ ಭೀತರಾಗಿರುವ ಜನರು
ಇದನ್ನೂ ಓದಿ:ಬಾಲಕನ ಮೇಲೆ ಬೀದಿ ನಾಯಿ ದಾಳಿ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ