ಗದಗ: ಬೀದಿ ನಾಯಿ ದಾಳಿಯಿಂದ ಗಾಯಗೊಂಡ ಬಾಲಕ - ಈಟಿವಿ ಭಾರತ ಕನ್ನಡ
ಗದಗ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಶಿವಾಜಿ ನಗರದಲ್ಲಿ ಇತ್ತೀಚೆಗೆ ನಡೆದಿದೆ. ಇಲ್ಲಿನ ನಿವಾಸಿ ಆದಿ ಪವಾರ್ ಗಾಯಾಳು ಬಾಲಕ. ಮನೆಯಿಂದ ಶಾಲೆಗೆ ಹೋಗುವಾಗ ಏಕಾಏಕಿ ನಾಯಿಗಳು ಬೆನ್ನಟ್ಟಿವೆ. ಮೊದಲು ಒಂದು ನಾಯಿ ದಾಳಿ ನಡೆಸಿದ್ದು, ಬಳಿಕ ಇನ್ನೆರಡು ನಾಯಿಗಳು ಸೇರಿಕೊಂಡಿವೆ. ನಾಯಿಗಳಿಂದ ತಪ್ಪಿಕೊಳ್ಳಲು ಬಾಲಕ ಮುಂದಾಗಿದ್ದಾನೆ. ಆದರೂ ಬೆನ್ನತ್ತಿ ಬಾಲಕನ ಮೇಲೆರಗಿ ಗಾಯಗೊಳಿಸಿವೆ.
ಬಾಲಕನ ಮೇಲೆ ನಾಯಿಗಳು ದಾಳಿ ನಡೆಸುತ್ತಿರುವುದನ್ನು ಕಂಡು ಸ್ಥಳೀಯರು ರಕ್ಷಣೆ ಓಡಿ ಬಂದಿದ್ದಾರೆ. ಸ್ಥಳೀಯರು ಬರುತ್ತಿದ್ದಂತೆ ಬೀದಿ ನಾಯಿಗಳು ಓಡಿ ಹೋಗಿವೆ. ಘಟನೆ ಸಂಪೂರ್ಣ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿವೆ. ಅವುಗಳನ್ನು ಹಿಡಿದು ಮುಂದಾಗುವ ಅನಾಹುತ ತಡೆಯುವಂತೆ ಸ್ಥಳೀಯರು ಪುರಸಭೆಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ದೇಶದ ಹಲವೆಡೆ ಶ್ವಾನ ದಾಳಿ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ :ಅಸ್ಸೋಂ ರಾಜ್ಯದ ಆರು ಜಿಲ್ಲೆಗಳಲ್ಲಿ ಭೀಕರ ಪ್ರವಾಹ: 21,000ಕ್ಕೂ ಜನರು ತತ್ತರ