ಕರ್ನಾಟಕ

karnataka

ಬಿಡಾಡಿ ಗೂಳಿ ದಾಳಿ

ETV Bharat / videos

ಅಲಿಗಢದಲ್ಲಿ 4 ವರ್ಷದ ಮಗುವಿನ ಮೇಲೆ ಗೂಳಿ ದಾಳಿ: ವಿಡಿಯೋ ವೈರಲ್​ - Stray bull attacked

By

Published : Mar 9, 2023, 5:06 PM IST

ಅಲಿಗಢ (ಉತ್ತರ ಪ್ರದೇಶ) : ಜಿಲ್ಲೆಯ ಧನಿಪುರ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 4 ವರ್ಷದ ಮಗುವಿನ ಮೇಲೆ ಗೂಳಿಯೊಂದು ದಾಳಿ ಮಾಡಿದೆ. ಇದರಿಂದ ಮಗು ಗಂಭೀರವಾಗಿ ಗಾಯಗೊಂಡಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಇದೀಗ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸ್ಥಳೀಯರ ಪ್ರಕಾರ, ಧನಿಪುರ ಮತ್ತು ಇತರ ಪ್ರದೇಶಗಳಲ್ಲಿ ಬಿಡಾಡಿ ಹೋರಿಗಳ ಕಾಟ ವಿಪರೀತವಾಗಿದೆ. ಗೂಳಿಗಳು ಸಾಮಾನ್ಯವಾಗಿ ಬೀದಿಗಳಲ್ಲಿ ಮತ್ತು ರಸ್ತೆಗಳಲ್ಲಿ ಮುಕ್ತವಾಗಿ ತಿರುಗಾಡುವುದನ್ನು ಕಾಣಬಹುದು. ಈ ಕುರಿತು ನಗರಸಭೆಗೆ ಹಲವು ಬಾರಿ ದೂರನ್ನೂ ಕೂಡಾ ನೀಡಲಾಗಿದೆ. ಇಷ್ಟಾದರೂ ಕೂಡಾ ಗೂಳಿ ಸಿಕ್ಕಿರಲಿಲ್ಲ ಎಂದಿದ್ದಾರೆ. 

ಗುರುವಾರ ಬೆಳಗ್ಗೆ ಧನಿಪುರದಲ್ಲಿ 4 ವರ್ಷದ ಮಗುವನ್ನು ಅಜ್ಜ ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದರು. ನಂತರ ಮಗುವನ್ನು ಬೀದಿಯಲ್ಲಿಯೇ ಬಿಟ್ಟು ಬೇರೆ ಯಾರನ್ನೋ ಭೇಟಿಯಾಗಲು ಹೋಗಿದ್ದಾರೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಬಂದ ಗೂಳಿಯೊಂದು ಏಕಾಏಕಿ ಮಗುವಿನ ಮೇಲೆ ದಾಳಿ ನಡೆಸಿದೆ.ಇದನ್ನು ಕಂಡ ಅಮಾಯಕ ಅಜ್ಜ ಓಡಿ ಬಂದು ಮಗುವನ್ನು ಎತ್ತಿಕೊಂಡಿದ್ದಾರೆ. ಘಟನೆಯಿಂದ ಮಗುವಿಗೆ ಗಂಭೀರವಾದ ಗಾಯವಾಗಿದೆ.

ಗೂಳಿಯನ್ನು ಹಿಡಿದ ಮಹಾನಗರ ಪಾಲಿಕೆ ತಂಡ: ಘಟನೆ ಬಳಿಕ ಸ್ಥಳೀಯರು ನಗರಸಭೆಗೆ ದೂರು ನೀಡಿದ್ದರು. ಇದಾದ ಬಳಿಕ ಆ ಪ್ರದೇಶದಲ್ಲಿ ಬಿಡಾಡಿ ಹೋರಿಗಳನ್ನು ಹಿಡಿಯುವ ಅಭಿಯಾನ ನಡೆಸಲಾಯಿತು. ಮಹಾನಗರ ಪಾಲಿಕೆ ತಂಡ ಸ್ಥಳಕ್ಕೆ ಆಗಮಿಸಿ ದಾಳಿ ಮಾಡುತ್ತಿದ್ದ ಗೂಳಿಯನ್ನು ಹಿಡಿಯಿತು. ಈ ಘಟನೆಯಿಂದ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗದಂತೆ ಜನ ನಿರ್ಬಂಧ ಹೇರಿದ್ದಾರೆ.

ಇದನ್ನೂ ಓದಿ :ಗುಂಡು ಹಾರಿಸಿ ಹೋಳಿ ಆಚರಣೆ; 450 ವರ್ಷಗಳಷ್ಟು ಹಳೆಯ ಪದ್ಧತಿ! ವಿಡಿಯೋ ನೋಡಿ

ABOUT THE AUTHOR

...view details