ಹಾವೇರಿ: ಬೈಕ್ ಜಾಥಾ ವೇಳೆ ಕಲ್ಲು ತೂರಾಟ, 15 ಯುವಕರು ಪೊಲೀಸ್ ವಶಕ್ಕೆ
ಹಾವೇರಿ:ಸಂಗೊಳ್ಳಿ ರಾಯಣ್ಣ ಪುತ್ಥಳಿ ಮೆರವಣಿಗೆ ಕುರಿತಂತೆ ಸಂಘಟನೆ ನಡೆಸಿದ ಬೈಕ್ ಜಾಥಾ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ ಘಟನೆ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ನಡೆದಿದೆ. ಆರಂಭದಲ್ಲಿ ಜಾಥಾ ಶಾಂತಿಯುತವಾಗಿ ನಡೆದಿತ್ತು. ಬಳಿಕ ಕೆಲವರು ಜಾಥಾ ಮಾರ್ಗ ಬದಲಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆಲ ಮನೆ ಹಾಗೂ ವಾಹನಗಳಿಗೆ ಹಾನಿಯಾಗಿದ್ದು, ಕೆಲ ಮಹಿಳೆಯರು ಗಾಯಗೊಂಡಿದ್ದಾರೆ.
ಯುವಕರು ಜಾಥಾ ಮಾಡುವಾಗ ಕೆಲವರು ಕಲ್ಲು ತೂರಾಟ ನಡೆಸಿದ ಪರಿಣಾಮ ಕೆಲ ಮನೆಗಳಿಗೆ ಹಾನಿಯಾಗಿದ್ದು, ಕೆಲ ಮಹಿಳೆಯರು ಗಾಯಗೊಂಡಿದ್ದಾರೆ. ಸದ್ಯ ಅಲ್ಲಿನ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಪರಿಸ್ಥಿತಿ ಶಾಂತವಾಗಿದೆ. ಸದ್ಯ 15 ಯುವಕರನ್ನು ವಿಚಾರಣೆಗೆ ವಶಕ್ಕೆ ಪಡೆದಿದ್ದೇವೆ ಎಂದು ಹಾವೇರಿ ಎಸ್ಪಿ ಶಿವಕುಮಾರ ಗುಣಾರೆ ತಿಳಿಸಿದ್ದಾರೆ. ಸೋಮವಾರ ರಟ್ಟಿಹಳ್ಳಿ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಮೆರವಣಿಗೆ ವಿಚಾರವಾಗಿ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು ಎಂಬ ವಿಚಾರದ ಬಗ್ಗೆಯೂ ಎಸ್ಪಿ ಇದೇ ವೇಳೆ ತಿಳಿಸಿದರು
ಇದನ್ನೂ ಓದಿ :ಆಸ್ಕರ್ ಪ್ರಶಸ್ತಿ ಪಡೆದ ಚಿತ್ರಗಳಿಗೆ ಮರಳು ಕಲಾಕೃತಿಯಿಂದ ಅಭಿನಂದನೆ ಕೋರಿದ ಪಟ್ನಾಯಕ್