ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಬಿದ್ದು ಗಾಯಗೊಂಡ ಪೈಲ್ವಾನರು - ವಿಡಿಯೋ - ಹೋರಿ
Published : Dec 18, 2023, 8:00 PM IST
|Updated : Dec 18, 2023, 8:06 PM IST
ಹಾವೇರಿ : ರಾಜ್ಯಮಟ್ಟದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಹಿಡಿಯಲು ಹೋಗಿದ್ದ ಪೈಲ್ವಾನರು ನೆಲಕ್ಕೆ ಬಿದ್ದು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕಲ್ಲೇದೇವರು ಗ್ರಾಮದಲ್ಲಿ ನಡೆದಿದೆ.
ಕಲ್ಲೇದೇವರ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಸ್ಪರ್ಧೆ ಆಯೋಜಿಸಲಾಗಿತ್ತು. ಕೆಲ ಪೈಲ್ವಾನರಿಗೆ ಹೋರಿ ಹಿಡಿಯುವ ವೇಳೆ ಕೊಬ್ಬರಿ ಹೋರಿಗಳು ಗುದ್ದಿವೆ. ಹೋರಿಗಳು ಗುದ್ದಿದ ರಸಕ್ಕೆ ನೆಲಕ್ಕೆ ಬಿದ್ದ ಹೋರಿ ಹಿಡಿಯುವ ಪೈಲ್ವಾನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಪರ್ಧೆಗೆ ಹಾವೇರಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಹೋರಿಗಳು ಆಗಮಿಸಿದ್ದವು.
ಹಾವೇರಿ ಜಿಲ್ಲೆಯ ಗ್ರಾಮೀಣ ಸೊಗಡಿನ ಕ್ರೀಡೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಒಂದಾಗಿದ್ದು, ದೀಪಾವಳಿ ನಂತರ ಈ ಸ್ಪರ್ಧೆಗಳನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತದೆ. ಸ್ಪರ್ಧೆಯಲ್ಲಿ ಹೋರಿಗಳಿಗೆ ಕೊಬ್ಬರಿ ಕಟ್ಟಲಾಗುತ್ತಿದ್ದು , ಕೊಬ್ಬರಿ ಹರಿಯಲು ಪೈಲ್ವಾನರು ಜೀವದ ಹಂಗು ತೊರೆದು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಕೆಲವು ಅವಘಡಗಳು ಸಂಭವಿಸಿರುವ ಸಾಕಷ್ಟು ಉದಾಹರಣೆಗಳಿವೆ. ಸ್ಪರ್ಧೆಯಲ್ಲಿ ಹೋರಿಗೆ ಕಟ್ಟಿದ ಕೊಬ್ಬರಿ ಹರಿದ ಫೈಲ್ವಾನರಿಗೆ ಸಹಸ್ರಾರು ರೂಪಾಯಿ ಹಾಗೂ ಚಿನ್ನ, ಬೆಳ್ಳಿಯ ಕಡಗಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದಲ್ಲದೇ ಹೋರಿ ಮೇಲೆ ಕಟ್ಟಲಾದ ಕೊಬ್ಬರಿಯನ್ನು ಹರಿದು ತಿಂದರೇ ಅದರಲ್ಲಿ ಹಲವು ರೋಗಗಳನ್ನು ವಾಸಿ ಮಾಡುವ ಔಷಧಿಯ ಗುಣಗಳಿವೆ ಎಂಬುದು ಇಲ್ಲಿಯ ಜನರ ನಂಬಿಕೆ.
ಇದನ್ನೂ ಓದಿ :ದಾವಣಗೆರೆಗೆ ತಲುಪಿದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ: ಕಳಶ ಹೊತ್ತು ಮೆರವಣಿಗೆ ಸಾಗಿದ ಮಹಿಳೆಯರು