ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಭಾಗವತ ಕಥಾದಲ್ಲಿ ನೂಕುನುಗ್ಗಲು: ಇಂತಹ ಘಟನೆ ಆಗಿಲ್ಲ ಎಂದ ಸಂಘಟಕರು! - ಶ್ರೀಮದ್ ಭಾಗವತ ಕಥಾ
ನವದೆಹಲಿ/ಗ್ರೇಟರ್ ನೋಯ್ಡಾ : ಗ್ರೇಟರ್ ನೋಯ್ಡಾದ ಬಾಗೇಶ್ವರ್ ಧಾಮ್ ಸರ್ಕಾರ್‌ನ ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರು ದರ್ಬಾರು ಆಯೋಜಿಸಿದ್ದರು. ಈ ವೇಳೆ ಜನದಟ್ಟಣೆಯಿಂದಾಗಿ ನೂಕುನುಗ್ಗಲು ಉಂಟಾಗಿದೆ. ಅದೇ ಸಮಯದಲ್ಲಿ ಶಾಖ ಮತ್ತು ತೇವಾಂಶದಿಂದ ಅನೇಕ ಜನರು ಮೂರ್ಛೆ ಹೋಗಿದ್ದಾರೆ. ಇದರಿಂದ 10 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಎಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಸ್ತವವಾಗಿ ಭಾಗವತವನ್ನು ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿಯವರು ಆಯೋಜಿಸಿದ್ದರು. ವಿಐಪಿ ಪಾಸ್‌ನ ಹಿಂದಿನ ಸಣ್ಣ ಗೇಟ್ ಮೂಲಕ ಜನರು ಪ್ರವೇಶ ಮಾಡುತ್ತಿದ್ದರು. ಅಲ್ಲಿ ವಿದ್ಯುತ್ ತಂತಿಗಳು ಇದ್ದ ಕಾರಣ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶಿಸಿದ್ದಾರೆ. ಅದೇ ಸಮಯದಲ್ಲಿ ಅತಿಯಾದ ಶಾಖದಿಂದಾಗಿ, ಅನೇಕ ಮಹಿಳೆಯರು ಮೂರ್ಛೆ ಹೋಗಿದ್ದಾರೆ. ನಂತರ ಅಲ್ಲಿ ಕಾಲ್ತುಳಿತ ಸಂಭವಿಸಿದೆ. ಆದರೆ, ಸ್ಥಳದಲ್ಲೇ ಪರಿಸ್ಥಿತಿ ನಿಭಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ನಿರೀಕ್ಷೆಗೂ ಮೀರಿದ ಭಕ್ತರು ಕಥಾಸ್ಥಳಕ್ಕೆ ಆಗಮಿಸಿದ್ದರು: ದಿವ್ಯ ಆಸ್ಥಾನದಲ್ಲಿ ನಿರೀಕ್ಷೆಗೂ ಮೀರಿ ಲಕ್ಷಾಂತರ ಭಕ್ತರು ಕಥಾಸ್ಥಳಕ್ಕೆ ಆಗಮಿಸಿದರು. ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ದರ್ಶನ ಪಡೆಯಲು ಜನರು ಸ್ಥಳದಲ್ಲಿ ಹತಾಶರಾಗಿ ನೋಡುತ್ತಿದ್ದರು. ಪರಿಸ್ಥಿತಿ ನೋಡಿದ ಪೊಲೀಸರು ಭಕ್ತರಿಗೆ ದಿವ್ಯ ದರ್ಬಾರು ಮುಕ್ತಾಯದ ಬಗ್ಗೆ ತಿಳಿಸಿ, ಮನೆಗೆ ಮರಳುವಂತೆ ಮನವಿ ಮಾಡಿದರು.
ಜಿಮ್ಸ್ನಲ್ಲಿ ಮುಂದುವರಿದ ಚಿಕಿತ್ಸೆ : ದಿವ್ಯ ದರ್ಬಾರ್ನಲ್ಲಿ ಗಾಯಗೊಂಡವರನ್ನು ರಾಜ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಮ್ಸ್ನ ತುರ್ತು ವಿಭಾಗಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 3 ಮಹಿಳೆಯರು ಮತ್ತು ಒಬ್ಬ ಪುರುಷ ಇಲ್ಲಿ ದಾಖಲಾಗಿದ್ದು, ಒಬ್ಬ ಮಹಿಳೆಯನ್ನು ಚಿಕಿತ್ಸೆ ನಂತರ ವಾಪಸ್ ಕಳುಹಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಗುಂಪಿನಲ್ಲಿ ಉಸಿರುಗಟ್ಟುವಿಕೆಯಿಂದಾಗಿ ನಾಲ್ವರೂ ತೊಂದರೆ ಅನುಭವಿಸಿದರು. ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರದಲ್ಲೇ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದೆ.
ದಿವ್ಯ ದರ್ಬಾರಿನಲ್ಲಿ ಕಾಲ್ತುಳಿತವಿಲ್ಲ:ಬಾಬಾ ಅವರ ದಿವ್ಯ ದರ್ಬಾರಿನಲ್ಲಿ ನೂಕುನುಗ್ಗಲು ಉಂಟಾಗಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ. ಕೆಲವು ವಿಡಿಯೊಗಳನ್ನು ತಪ್ಪಾಗಿ ನಿರೂಪಿಸಲಾಗಿದೆ. ದೈವಿಕ ದರ್ಬಾರಿನ ಕಾರಣ ಇಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ವ್ಯವಸ್ಥಾಪನಾ ಸಮಿತಿ ಹಾಗೂ ಆಡಳಿತ ಮಂಡಳಿಯಿಂದ ಸ್ವಲ್ಪ ತೊಂದರೆಯ ನಂತರ ಎಲ್ಲವೂ ಸರಿಯಾಗಿ ನಡೆದಿದೆ. ಗ್ರೇಟರ್ ನೋಯ್ಡಾದ ಜೈತ್‌ಪುರ ಗ್ರಾಮದ ಬಳಿ ಜುಲೈ 10 ರಿಂದ ಬಾಗೇಶ್ವರ ಧಾಮ ಸರ್ಕಾರ್ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಂದ ಶ್ರೀಮದ್ ಭಾಗವತ ಕಥಾವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಜುಲೈ 16ರವರೆಗೆ ನಡೆಯಲಿದೆ.