ಕರ್ನಾಟಕ

karnataka

ETV Bharat / videos

ಮಾವುತರು, ಕಾವಾಡಿಗರ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಸಚಿವ ಎಸ್.ಟಿ.ಸೋಮಶೇಖರ್ - ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಟೆಂಟ್ ಶಾಲೆ

By

Published : Sep 5, 2022, 5:23 PM IST

Updated : Feb 3, 2023, 8:27 PM IST

ಮೈಸೂರು: ಸಚಿವ ಎಸ್.ಟಿ.ಸೋಮಶೇಖರ್ ಅವರು ಮಾವುತರು ಮತ್ತು ಕಾವಾಡಿಗರ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಮೈಸೂರು ದಸರಾ ಹಬ್ಬದ ನಿಮಿತ್ತ ಗಜಪಡೆಯೊಂದಿಗೆ ಆಗಮಿಸಿರುವ ಮಾವುತ, ಕಾವಾಡಿ ಹಾಗೂ ಸಹಾಯಕರ ಕುಟುಂಬಗಳು ಇಲ್ಲೇ ವಾಸ್ತವ್ಯ ಹೂಡಿದ್ದು, 2 ತಿಂಗಳ ಕಾಲ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ, ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಟೆಂಟ್ ಶಾಲೆ ತೆರೆದಿದ್ದು, ಸಚಿವರು ಶಾಲೆಯನ್ನು ಉದ್ಘಾಟಿಸಿದರು. ಈ ವೇಳೆ ಮಕ್ಕಳು ಸಚಿವರ ಎದರು ನೃತ್ಯ ಪ್ರದರ್ಶಿಸಿದರು. ಮಕ್ಕಳ ನೃತ್ಯವನ್ನು ವೀಕ್ಷಿಸುತ್ತಿದ್ದ ಸಚಿವರು ಅವರೊಂದಿಗೆ ಸೇರಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಕ್ಕಳು, ಶಿಕ್ಷಕರು ಸಹ ಸಚಿವರೊಂದಿಗೆ ಕುಣಿದು ಸಂತಸಪಟ್ಟರು.
Last Updated : Feb 3, 2023, 8:27 PM IST

ABOUT THE AUTHOR

...view details