ಕರ್ನಾಟಕ

karnataka

ಶ್ರೀರಾಮ ಸೇನಾ ವತಿಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ

ETV Bharat / videos

ಹುಬ್ಬಳ್ಳಿ ‌ಈದ್ಗಾ ಮೈದಾನದಲ್ಲಿ ‌ಗಣೇಶ ಮೂರ್ತಿ‌ ಪ್ರತಿಷ್ಠಾಪನೆಗೆ ಶ್ರೀರಾಮಸೇನೆ ಮನವಿ - ಶ್ರೀರಾಮ ಸೇನೆ ಉಗ್ರ ಹೋರಾಟ‌

By

Published : Aug 17, 2023, 4:51 PM IST

Updated : Aug 17, 2023, 6:30 PM IST

ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಸೆಪ್ಟೆಂಬರ್ 9ರಂದು ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ, ಶ್ರೀರಾಮ ಸೇನೆಯ ವತಿಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಇಂದು ಮನವಿ ಸಲ್ಲಿಸಲಾಯಿತು.

ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷವೂ ನಗರದ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದ್ದೇವೆ. ಕಳೆದ ವರ್ಷ ಕೊನೆ ಗಳಿಗೆಯಲ್ಲಿ ಮೂರು‌ ದಿನಗಳ‌ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿತ್ತು. ಆದರೆ, ಈ‌ ಬಾರಿ ಮುಂಚಿತವಾಗಿ ಮಹಾನಗರ ಪಾಲಿಕೆಗೆ ಅನುಮತಿ ಕೇಳುತ್ತಿದ್ದೇವೆ. 

11 ದಿನಗಳವರೆಗೆ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕು. ಭಕ್ತಿಗೀತೆ, ನೃತ್ಯ, ದೇಶಭಕ್ತಿ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಡೊಳ್ಳಿನ ಕುಣಿತ, ಭಜನೆ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹೀಗಾಗಿ ಮೂರು ದಿನಗಳ ಗಡುವನ್ನು ಮಹಾನಗರ ಪಾಲಿಕೆಗೆ ನೀಡುತ್ತಿದ್ದೇವೆ. ಗಣಪತಿ ಪ್ರತಿಷ್ಠಾಪನೆಗೆ ಶೀಘ್ರವೇ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ವಿಭಾಗದ ಅಧ್ಯಕ್ಷ ಗದಿಗೆಪ್ಪ ಕುರವತ್ತಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಜಿಲ್ಲಾ ಗೌರವ ಅಧ್ಯಕ್ಷ ರಾಜು ಗಾಡಗೋಳಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಮಂಜು ಕಾಟಕರ, ತಾಲೂಕು ಅಧ್ಯಕ್ಷ ಬಸು ದುರ್ಗದ, ನಗರ ಪ್ರಮುಖ ಪ್ರವೀಣ ಮಾಳದಕರ, ಬಸವರಾಜ್ ಗೌಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಈದ್ಗಾ ಗಣಪನಿಗೆ ಸಂಭ್ರಮದ ವಿದಾಯ: ಕುಣಿದು ಕುಪ್ಪಳಿಸಿದ ಕಾರ್ಯಕರ್ತರು

Last Updated : Aug 17, 2023, 6:30 PM IST

ABOUT THE AUTHOR

...view details