ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡಿನಲ್ಲಿ ಶ್ರೀ ಮಂಗಳಾದೇವಿಗೆ ಶಯನೋತ್ಸವ ಶೃಂಗಾರ-ನೋಡಿ - ಮಂಗಳೂರು ಲೇಟೆಸ್ಟ್ ನ್ಯೂಸ್
ಮಂಗಳೂರು: ನಗರದ ಶ್ರೀ ಮಂಗಳಾ ದೇವಿಯ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ವೈಭವದ ಶಯನೋತ್ಸವಕ್ಕೆ ಒಂದು ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡು ಸಮರ್ಪಣೆ ಮಾಡಲಾಗಿದೆ. ಶ್ರೀ ಮಂಗಳಾ ದೇವಿಯ ವರ್ಷಾವಧಿ ಜಾತ್ರೆಯ 5ನೇ ದಿನ ಉತ್ಸವದ ಪ್ರಯುಕ್ತ ರಥ ಸವಾರಿ, ಬಲಿ ಉತ್ಸವಾದಿಗಳು ನಡೆಯಿತು. ಬಳಿಕ ಮಹಾಪೂಜೆ ನಡೆದು ಕವಾಟ ಬಂಧನದ ಬಳಿಕ ಶಯನೋತ್ಸವ ಆರಂಭವಾಯಿತು. ಈ ಕಾರ್ಯಕ್ರಮಕ್ಕೆ ಸಾಯಂಕಾಲ 4 ಗಂಟೆಯಿಂದಲೇ ಭಕ್ತರು ದೇವಿಗೆ ಮಲ್ಲಿಗೆಯನ್ನು ಅರ್ಪಿಸಿದ್ದಾರೆ.
"ಸುಮಾರು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಮಲ್ಲಿಗೆ ಚೆಂಡಿನ ರಾಶಿಯಲ್ಲಿ ಶ್ರೀದೇವಿಯ ಶಯನೋತ್ಸವ ಸೇವೆ ನೆರವೇರಿದೆ. ಈ ಮೂಲಕ ದೇವಿಯು ತನ್ನ ಆಲಯದಲ್ಲಿ ಮಲ್ಲಿಗೆಯಿಂದ ತುಂಬಿದ ಸುಪ್ಪತ್ತಿಗೆಯಲ್ಲಿ ಏಕಾಂತ ಸ್ಥಿತಿಯಲ್ಲಿ ಸುಖ ನಿದ್ದೆಗೆ ಜಾರುತ್ತಾಳೆ" ಎಂಬುದು ಅನಾದಿ ಕಾಲದಿಂದ ಬಂದ ನಂಬಿಕೆ. ಅದೇ ಪ್ರಕಾರ ಪೂರ್ವ ಶಿಷ್ಟ ಸಂಪ್ರದಾಯದಂತೆ ಗರ್ಭಗೃಹದ ಕವಾಟ ಬಂಧನ ನೆರವೇರಿ ಅಮ್ಮನಿಗೆ ಶಯನ ವೈಭೋಗ ನೆರವೇರಿತು.
ಇದನ್ನೂ ಓದಿ:ಶ್ರೀ ಮಹಾಲಕ್ಷ್ಮೀ ಬಿಂಬದ ಮೇಲೆ ಸೂರ್ಯರಶ್ಮಿ ಸ್ಪರ್ಶ.. ಕಣ್ತುಂಬಿಕೊಂಡ ಭಕ್ತರು