ವಿರಾಟ್ ಕೊಹ್ಲಿಗೆ ಬೆಳ್ಳಿಯ ಬ್ಯಾಟ್ ಉಡುಗೊರೆ ನೀಡಿದ ಶ್ರೀಲಂಕಾ ಯುವ ಕ್ರಿಕೆಟಿಗ - ಬೌಲರ್ ಚಂದ್ರಮೋಹನ್ ಕೃಷ್ಣನಾಥ್
Published : Sep 10, 2023, 8:49 AM IST
ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಏಷ್ಯಾ ಕಪ್-2023ರ ಸೂಪರ್-4 ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ಆಟಗಾರರು ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಇದರ ಮಧ್ಯೆ ಶ್ರೀಲಂಕಾದ ಉದಯೋನ್ಮುಖ ಕ್ರಿಕೆಟಿಗರೊಬ್ಬರು ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆ ಕೊಟ್ಟು ಗಮನ ಸೆಳೆದರು.
ಲಂಕಾದ ಯುವ ಕ್ರಿಕೆಟಿಗ ಚಂದ್ರಮೋಹನ್ ಕೃಷ್ಣನಾಥ್ ಅವರು ಕೊಹ್ಲಿಗೆ ಬೆಳ್ಳಿಯ ಬ್ಯಾಟ್ ಗಿಫ್ಟ್ ನೀಡಿದ್ದಾರೆ. ಈ ಕುರಿತಾದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಚಂದ್ರಮೋಹನ್ ಕೃಷ್ಣನಾಥ್ ಮಾತನಾಡಿ, "ನಾನು ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ. ಹಾಗಾಗಿ, ಅವರಿಗೆ ಬೆಳ್ಳಿ ಬ್ಯಾಟ್ ಉಡುಗೊರೆಯಾಗಿ ನೀಡಿದ್ದೇನೆ. ಈ ಬ್ಯಾಟ್‌ನಲ್ಲಿ ಅವರ ಪ್ರತಿಯೊಂದು ಶತಕದ ವಿವರಗಳನ್ನು ಕೆತ್ತಿದ್ದೇನೆ" ಎಂದರು.
ಇದಕ್ಕೂ ಕೆಲವು ದಿನಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕಾಲಿರಿಸಿ 15 ವರ್ಷ ಪೂರ್ಣಗೊಳಿಸಿದ ವಿರಾಟ್ ಕೊಹ್ಲಿಗೆ ಸೂರತ್‌ನ ಉದ್ಯಮಿಯೊಬ್ಬರು ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಬ್ಯಾಟ್ ನೀಡಿ ಗೌರವಿಸಿದ್ದರು. (ಎಎನ್ಐ)
ಇದನ್ನೂ ಓದಿ :ಎಂಟು ದಿನದ ಬಳಿಕ ಮತ್ತೆ ಪಾಕ್ ಮೇಲೆ ಪಂದ್ಯ.. ಭಾರತ ತಂಡದಲ್ಲಿ ಎರಡು ಬದಲಾವಣೆ ಖಂಡಿತಾ!