ಕರ್ನಾಟಕ

karnataka

ಹುನಗುಂದ ಕ್ಷೇತ್ರದಲ್ಲಿ ಈ ಬಾರಿ ಗೆಲುವು ನಂದೇ: ಎಸ್​ ಆರ್ ನವಲಿ ಹಿರೇಮಠ

ETV Bharat / videos

ಹುನಗುಂದ ಕ್ಷೇತ್ರದಲ್ಲಿ ಈ ಬಾರಿ ಗೆಲುವು ನಂದೇ: ಎಸ್​ ಆರ್ ನವಲಿ ಹಿರೇಮಠ - etv bharat kannada

By

Published : Apr 24, 2023, 10:48 PM IST

ಬಾಗಲಕೋಟೆ: ಜಿಲ್ಲೆಯ ಏಳು ವಿಧಾನಸಭೆ ಮತಕ್ಷೇತ್ರಗಳ ಪೈಕಿ ಹುನಗುಂದ ಮತಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಎಸ್​ ಆರ್ ನವಲಿ ಹಿರೇಮಠ ಅವರು ಕೊನೆಯ ಘಳಿಗೆಯಲ್ಲಿ ಜನಾರ್ದನರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡು ನಾಮಪತ್ರ ಸಲ್ಲಿಸಿದ್ದಾರೆ. ಎಸ್ ಆರ್ ನವಲಿ ಹಿರೇಮಠ ಅವರು ಒಮ್ಮೆ ಜೆಡಿಎಸ್ ನಿಂದ, ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದಾರೆ. 

ನವಲಿ ಹಿರೇಮಠ ಅವರು ಈ ಬಾರಿ ಶತಾಯಗತಾಯ ಗೆಲುವು ಸಾಧಿಸಲು ಪಣತೊಟ್ಟಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಗಾಲಿ ಜನಾರ್ದನ ರೆಡ್ಡಿ ಅವರನ್ನು ಕರೆಯಿಸಿ, ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ನಾಮಪತ್ರ ಸಲ್ಲಿಸಿದ್ದರು. 

ಈಟಿವಿ ಭಾರತ ದೊಂದಿಗೆ ಮಾತನಾಡಿದ ಅವರು, ಹುನಗುಂದ ಮತಕ್ಷೇತ್ರದಲ್ಲಿ 800 ಕೋಟಿ ರೂಪಾಯಿಗಳ ಹನಿ ನೀರಾವರಿ ಯೋಜನೆ ಅವ್ಯವಹಾರ ನಡೆದಿದೆ. ಎರಡು ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಿಂದ ಹನಿ ನೀರಾವರಿ ಯೋಜನೆ ನೆಲ ಕಚ್ಚಿಹೋಗಿದೆ. ಇದರಿಂದ ನೀರಾವರಿ ಯೋಜನೆ ಇಲ್ಲದೆ, ಕ್ಷೇತ್ರದ ರೈತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೆಆರ್​ಪಿಪಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಹತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಜಗದೀಶ್​ ಶೆಟ್ಟರ್ ಈ ಚುನಾವಣೆಯಲ್ಲಿ ಸೋಲ್ತಾರೆ: ಅಮಿತ್ ಶಾ ಭವಿಷ್ಯ

ABOUT THE AUTHOR

...view details