ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ: ಪಾಲಿಕೆಯಿಂದ ಮರಗಳಿಗೆ ನೀರು ಸಿಂಪಡನೆ-ವಿಡಿಯೋ - ದೆಹಲಿಯಲ್ಲಿ ವಾಯು ಗುಣಮಟ್ಟ
Published : Nov 9, 2023, 11:56 AM IST
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ದಿನದಿನಕ್ಕೆ ಕುಸಿಯುತ್ತಿದೆ. ವಿಪರೀತ ಮಾಲಿನ್ಯದಿಂದಾಗಿ ಜನರು ಪರದಾಡುವಂತಾಗಿದೆ. ದೆಹಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಿದ್ದರೂ ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ.
ಪರಿಸರ ಸಚಿವ ಗೋಪಾಲ್ ರೈ ಎಲ್ಲ ಸಚಿವರ ತುರ್ತು ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ದೆಹಲಿಯಲ್ಲಿ ಈ ಸಭೆ ನಡೆಯಲಿದೆ. ಈಗಾಗಲೇ ಮಕ್ಕಳ ಹಿತದೃಷ್ಟಿಯಿಂದ ಅವಧಿಗೂ ಮುನ್ನವೇ ಶಾಲಾ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದೆ.
ವಾಯುಗುಣಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಪಾಲಿಕೆ ವತಿಯಿಂದ ನೀರು ಸಿಂಪಡಿಸುವ ಕಾರ್ಯ ಮಾಡಲಾಗುತ್ತಿದೆ. ಇಂದು ಬಳಿಗ್ಗೆ ಲೋಧಿ ರಸ್ತೆಯಲ್ಲಿ ಮರ, ಗಿಡಗಳಿಗೆ ನೀರು ಸಿಂಪಡಿಸುತ್ತಿ ದೃಶ್ಯ ಕಂಡುಬಂತು.
ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಹೆಚ್ಚಳವಾಗುತ್ತಿದ್ದು, ಗುರುವಾರ ಬೆಳಿಗ್ಗೆ 420ಕ್ಕೆ ತಲುಪಿದೆ. ಬುಧವಾರದಂದು ಸಂಜೆ 4 ಗಂಟೆಗೆ 426 ಇತ್ತು. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾಹಿತಿ ಪ್ರಕಾರ, ಗಾಜಿಯಾಬಾದ್ನಲ್ಲಿ 369, ಗುರುಗ್ರಾಮ 396, ನೋಯ್ಡಾ 394, ಗ್ರೇಟರ್ ನೋಯ್ಡಾ 450, ಫರಿದಾಬಾದ್ 413 ವಾಯುಗುಣಮಟ್ಟ ಸೂಚ್ಯಂಕವನ್ನು ಹೊಂದಿದೆ. ಇದು ಅತ್ಯಂತ ಕಳಪೆ ಮಟ್ಟ ಎಂದು ಹೇಳಿದೆ.
ಇದನ್ನೂ ಓದಿ:ವಿಷಪೂರಿತ ಗಾಳಿ ಎಫೆಕ್ಟ್: ದೆಹಲಿಯಲ್ಲಿ ಅವಧಿಗೂ ಮೊದಲೇ ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ