ಕರ್ನಾಟಕ

karnataka

ವಿಶ್ವಕಪ್ ಸೆಮಿಫೈನಲ್​ನಲ್ಲಿ ಭಾರತ ಗೆಲ್ಲಲೆಂದು ಗಣಪತಿಗೆ ವಿಶೇಷ ಪೂಜೆ

ETV Bharat / videos

ವಿಶ್ವಕಪ್ ಸೆಮಿಫೈನಲ್​ನಲ್ಲಿ ಭಾರತ ಗೆಲ್ಲಲೆಂದು ಗಣಪತಿಗೆ ವಿಶೇಷ ಪೂಜೆ : ವಿಡಿಯೋ - ಸೆಮಿಫೈನಲ್​ನಲ್ಲಿ ಭಾರತ ಗೆಲ್ಲಲೆಂದು ಗಣಪತಿಗೆ ವಿಶೇಷ ಪೂಜೆ

By ETV Bharat Karnataka Team

Published : Nov 15, 2023, 1:24 PM IST

ಮೈಸೂರು : ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸೆಮಿ ಫೈನಲ್​ನಲ್ಲಿ ಭಾರತ ಗೆಲ್ಲಲಿ ಎಂದು ಸಾಂಸ್ಕೃತಿಕ ನಗರಿಯ ಕ್ರಿಕೆಟ್ ಪ್ರೇಮಿಗಳು ಅಗ್ರಹಾರ ವೃತ್ತದಲ್ಲಿರುವ ನೂರೊಂದು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. 

ಭಾರತ - ನ್ಯೂಜಿಲೆಂಡ್‌ ನಡುವಿನ ವಿಶ್ವಕಪ್ ಕ್ರಿಕೆಟ್‌ ಸೆಮಿ ಫೈನಲ್‌ ಪಂದ್ಯವನ್ನು ವೀಕ್ಷಿಸಲು ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಈ ಬೆನ್ನಲ್ಲೇ ಮೈಸೂರಿನ ಕ್ರಿಕ್ರೆಟ್​ ಅಭಿಮಾನಿಗಳು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಜಯಗಳಿಸಿ, ಫೈನಲ್ ಪ್ರವೇಶ ಮಾಡುವ ಮೂಲಕ ಟ್ರೋಫಿ ಗೆಲ್ಲಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಭಾರತದ ಕ್ರೀಡಾಪಟುಗಳ ಭಾವಚಿತ್ರ ಹಿಡಿದು ವಿಶೇಷ ಪೂಜೆ ಮಾಡಲಾಯಿತು. ಆನಂತರ ಫೈನಲ್​ನಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಜಯಕಾರದ ಘೋಷಣೆ ಕೂಗಿದರು.  

ಇದನ್ನೂ ಓದಿ :ವಿಶ್ವಕಪ್ ಕ್ರಿಕೆಟ್‌ : ಭಾರತ - ನ್ಯೂಜಿಲೆಂಡ್‌ ಹೈವೋಲ್ಟೇಜ್​ ಸೆಮಿ ಫೈನಲ್‌​ ವೀಕ್ಷಿಸಲಿರುವ ರಜಿನಿಕಾಂತ್

ABOUT THE AUTHOR

...view details