ಚಂದ್ರಯಾನ 3 ಉಡಾವಣೆ ಯಶಸ್ವಿಗೆ ಪರಿಸರ ಪ್ರೇಮಿಗಳಿಂದ ವಿಶೇಷ ಪೂಜೆ - ವಿಡಿಯೋ - ಇಸ್ರೋದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರ
ದಾವಣಗೆರೆ:ಇಂದು ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಆರಂಭ ಆಗಿದೆ. ಚಂದ್ರಯಾನ-3 ಯಶಸ್ವಿಯಾಗಲಿ ಎಂದು ದಾವಣಗೆರೆ ನಗರದ ವೆಂಕಟೇಶ್ವರ ದೇವಾಲಯದಲ್ಲಿ ಪರಿಸರಿ ಪ್ರೇಮಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ನಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು.
ಚಂದ್ರಯಾನ 3 ಉಡಾವಣೆ ಯಶಸ್ವಿಯಾಗಲು ಪೂಜೆ ಮಾಡಲಾಗಿದ್ದು, ಪರಿಸರ ಪ್ರೇಮಿ ಗೋಪಾಲಗೌಡ, ಅರ್ಚಕ ಬಾಲಾಜಿಯವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇಂದು ಮಧ್ಯಾಹ್ನ 2.35ರ ವೇಳೆಗೆ ಭಾರತದ ಚಂದ್ರಯಾನ-3 ಉಡಾವಣೆ ಆಗಲಿದ್ದು, ಯಶಸ್ವಿಯಾಗಲಿ ಎಂದು ಹರಸಲಾಯಿತು.
ಈ ಚಂದ್ರಯಾನ ಉಡಾವಣೆ ಆಂಧ್ರಪ್ರದೇಶ ರಾಜ್ಯದ ಸುಳ್ಳೂರು ಪೇಟೆಯಲ್ಲಿರುವ ಇಸ್ರೋದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆಗೆ ಸಿದ್ಧವಾಗಿದೆ. ಈ ಐತಿಹಾಸಿಕ ದಾಖಲೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ನಡೆಸಿದ ಚಂದ್ರಯಾನ-2 ರ ಮುಂದುವರೆದ ಭಾಗವಾಗಿದೆ. ಉಡಾವಣೆ ಯಶಸ್ವಿಯಾಗಲೆಂದು ದಾವಣಗೆರೆ ಜನರ ಆಶಯವಾಗಿದೆ. ಈ ಬಾರಿಯಾವುದೆ ಅಡಚಣೆ ಆಗದಂತೆ ಇಸ್ರೋ ವಿಜ್ಞಾನಿಗಳು ಎಚ್ಚರಿವಹಿಸಿ ವಿಶೇಷ ತಂತ್ರಜ್ಞಾನದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ:ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ: ಮಧ್ಯಾಹ್ನ 2.35 ಕ್ಕೆ ನಭಕ್ಕೆ ಚಿಮ್ಮಲಿದೆ ಉಪಗ್ರಹ