ಕರ್ನಾಟಕ

karnataka

ಶಿವಮೊಗ್ಗಕ್ಕೆ ಎಸ್​ಪಿಜಿ ತಂಡ ಆಗಮನ

ETV Bharat / videos

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಸ್​ಪಿಜಿ ತಂಡ ಆಗಮನ- ವಿಡಿಯೋ - Etv Bharat Kannada

By

Published : Feb 23, 2023, 9:23 PM IST

ಶಿವಮೊಗ್ಗ:ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಂದು ಎರಡನೇ ವಿಮಾನ ಆಗಮಿಸಿತು. ವಾಯುಪಡೆಯ ವಿಶೇಷ ವಿಮಾನದಲ್ಲಿ ದೆಹಲಿಯಿಂದ ಎಸ್​ಪಿ‌‌ಜಿ (ವಿಶೇಷ ರಕ್ಷಣಾ ತಂಡ) ಅಧಿಕಾರಿಗಳು ಬಂದಿಳಿದರು. ಫೆಬ್ರವರಿ 27 ರಂದು ಪ್ರಧಾನಿ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿರುವ ಹಿನ್ನೆಲೆಯಲ್ಲಿ ಕೇಂದ್ರದ ವಿಶೇಷ ಭದ್ರತ ಪಡೆ ರಕ್ಷಣೆಗಾಗಿ ಜಿಲ್ಲೆಗೆ ಆಗಮಿಸಿದೆ‌. ವಿಮಾನದಲ್ಲಿ ಪ್ರಧಾನಿ‌ ಮೋದಿ ಸಂಚಾರ ಮಾಡುವ ಕಾರನ್ನು ತರಲಾಗಿದೆ. ವಿಮಾನದಲ್ಲಿ ವಿಶೇಷ ಭದ್ರತೆ ಪಡೆಯ ಮೂರು ಕಾರುಗಳನ್ನು ತಮ್ಮೊಂದಿಗೆ ತಂದಿದ್ದಾರೆ. ಸುಮಾರು ಆರು ಜನರ ಎಸ್​ಪಿಜಿ ತಂಡ ಆಗಮಿಸಿದೆ. ಈ ತಂಡವು ನಾಳೆಯಿಂದ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದು ಪ್ರಧಾನಿ ಬಂದು ಹೋಗುವವರೆಗೂ ಉಸ್ತುವಾರಿ ವಹಿಸಲಿದೆ.

ಇದನ್ನೂ ಓದಿ:Watch.. ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ಬಂದಿಳಿದ ಲೋಹದ ಹಕ್ಕಿ

ABOUT THE AUTHOR

...view details