Chandrayaan-3 : ಚಂದ್ರಯಾನ 3 ಸಕ್ಸಸ್ಗಾಗಿ ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ವಿಶೇಷ ಪೂಜೆ - ಚಂದ್ರಯಾನ 3 ಸಕ್ಸಸ್ಗಾಗಿ ವಿಶೇಷ ಪೂಜೆ
Published : Aug 23, 2023, 12:19 PM IST
ಬೆಳಗಾವಿ :ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಚಂದ್ರಯಾನ 3 ಮಿಷನ್ ಚಂದ್ರನ ಕಕ್ಷೆಗೆ ಇಳಿಯಲು ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲೆಂದು ವಿವಿಧ ದೇವಸ್ಥಾನಗಳಲ್ಲಿ ಪ್ರಾರ್ಥಿಸಲಾಗುತ್ತಿದೆ. ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ಮಂದಿರದಲ್ಲಿ ಸಹ ಆಡಳಿತ ಮಂಡಳಿ ವತಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಪ್ರಾರ್ಥನೆ ಸಲ್ಲಿಸಿದರು.
ಈಟಿವಿ ಭಾರತದ ಜೊತೆ ಮಾತನಾಡಿದ ಅರ್ಚಕ ನಾಗರಾಜ ಕಟ್ಟಿ, 140 ಕೋಟಿ ಭಾರತೀಯರ ಬಯಕೆ ಈಡೇರಲಿ ಎಂದು ಕಪಿಲೇಶ್ವರ ದೇವರಿಗೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಶತರುದ್ರ, ಲಘುರುದ್ರ, ರುದ್ರಾಕ್ಷಿ, ಏಕಾದಶಿ ಪೂಜೆಗಳನ್ನು ಮಾಡಿದ್ದೇವೆ. ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಸ್ಪರ್ಶ ಮಾಡಲಿ, ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಲಿ. ಇದರಲ್ಲಿ ನಮ್ಮ ಬೆಳಗಾವಿಯ ಇಬ್ಬರು ವಿಜ್ಞಾನಿಗಳು ಕೈಜೋಡಿಸಿರುವುದು ಹೆಮ್ಮೆಯ ಸಂಗತಿ ಎಂದರು.
ನಗರಸೇವಕ ಶಂಕರಗೌಡ ಪಾಟೀಲ ಮಾತನಾಡಿ, "ಇದು ಕೇವಲ ವಿಜ್ಞಾನಿಗಳ ಸಾಧನೆ ಅಲ್ಲ, ಇಡೀ ದೇಶದ ಸಾಧನೆ. ಚಂದ್ರನ ಮೇಲೆ ಇಳಿಯುತ್ತಿರುವ ನಾಲ್ಕನೇ ಮತ್ತು ಸೌತ್ಪೋಲ್ನಲ್ಲಿ ಇಳಿಯುತ್ತಿರುವ ಮೊದಲ ದೇಶ ಭಾರತ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸುರಕ್ಷಿತವಾಗಿ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿ ಎಂದು ಹಾರೈಸಿದರು.
ಇದನ್ನೂ ಓದಿ :ಚಂದ್ರಯಾನ 3 ಯಶಸ್ವಿಯಾಗಲೆಂದು ದೇಶ, ವಿದೇಶಗಳಲ್ಲಿ ಪ್ರಾರ್ಥನೆ: ಹೋಮ, ಹವನ, ಪೂಜೆ ನಡೆಸುತ್ತಿರುವ ಭಕ್ತರು