ಕರ್ನಾಟಕ

karnataka

ಡಿಜೆ ಸಾಂಗ್‌ಗೆ ಎಸ್ಪಿ ವೇದಮೂರ್ತಿ ಭರ್ಜರಿ ಸ್ಟೇಪ್ಸ್​

ETV Bharat / videos

ಹೋಳಿ: ಡಿಜೆ ಸಾಂಗ್‌ಗೆ ಎಸ್ಪಿ ವೇದಮೂರ್ತಿ ಭರ್ಜರಿ ಸ್ಟೆಪ್ಸ್- ವಿಡಿಯೋ​ - ಎಸ್ಪಿ ಡಾ ವೇದಮೂರ್ತಿ ಡ್ಯಾನ್ಸ್​

By

Published : Mar 9, 2023, 10:30 AM IST

ಯಾದಗಿರಿ:ಬುಧವಾರ ಜಿಲ್ಲೆಯಾದ್ಯಂತ ಹೋಳಿ ಸಂಭ್ರಮಾಚರಣೆ ವಿಜೃಂಭಣೆಯಿಂದ ನಡೆಯಿತು. ಜನರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಳ್ಳುವ ಮೂಲಕ ಖುಷಿ ಪಟ್ಟರು. ಶಾಂತಿ, ಸೌಹಾರ್ದತೆಯಿಂದ ಹೋಳಿ ಆಚರಿಸುವಂತೆ ಪೊಲೀಸ್​ ಇಲಾಖೆ ಮುಂಚಿತವಾಗಿ ತಿಳಿಸಿತ್ತು. ಅದರಂತೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಹೋಳಿ ಹಬ್ಬಾಚರಣೆ ನಡೆದಿದೆ. ಮೊತ್ತೊಂದೆಡೆ, ಹೋಳಿ ಹಬ್ಬದ ಪ್ರಯುಕ್ತ ಎಲ್ಲೆಡೆ ಡಿಜೆ ಸ್ಪೀಕರ್‌ಗಳನ್ನು ಅಬ್ಬರದ ಸಂಗೀತಕ್ಕೆ ಜನರು ನೃತ್ಯ ಮಾಡಿದರು. ಎಸ್ಪಿ ಕಚೇರಿಯಲ್ಲೂ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಪೊಲೀಸರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಳ್ಳುವ ಮೂಲಕ ಆಚರಣೆ ಮಾಡಿದರು. ಎಸ್ಪಿ ಡಾ.ವೇದಮೂರ್ತಿ ಅವರು, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಜನಪ್ರಿಯ ಹಾಡಿಗೆ ಭರ್ಜರಿ ಸ್ಟೆಪ್ ಹಾಕುವ ಮೂಲಕ ಗಮನಸೆಳೆದರು. ಈ ಸಂದರ್ಭದಲ್ಲಿ ಹಿರಿಯ ಪೊಲೀಸರು ಅವರಿಗೆ ಸಾಥ್​ ನೀಡಿರುವ ವಿಡಿಯೋ ಮೊಬೈಲ್ ಸ್ಟೇಟಸ್​ಗಳಲ್ಲಿ ಹರಿದಾಡಿವೆ. ಶಹಾಪುರ, ಸುರಪುರ, ಯಾದಗಿರಿ, ಗುರುಮಠಕಲ್, ಹುಣಸಗಿ ಮತ್ತು ವಡಗೇರಾ ತಾಲೂಕುಗಳಲ್ಲಿ ಶಾಂತಿ, ಸೌಹಾರ್ದತೆಯಿಂದ ಹೋಳಿ ಹಬ್ಬ ಆಚರಣೆ ನಡೆದಿದೆ.

ಇದನ್ನೂ ಓದಿ:ತಮಟೆ ಸದ್ದಿಗೆ ಮಹಿಳಾ ಪಿಎಸ್​​ಐ ಸಖತ್​ ಡ್ಯಾನ್ಸ್, ಬಣ್ಣ ಎರಚಿ ಸಂಭ್ರಮಿಸಿದ ಡಿಸಿ 

ABOUT THE AUTHOR

...view details