ಅಂಜನಾದ್ರಿಯಲ್ಲಿ 350ಕ್ಕೂ ಹೆಚ್ಚು ತಾಳೆ ಮರದ ಬೀಜ ಬಿತ್ತನೆ: ಪರಿಸರ ಸಂರಕ್ಷಣೆಗೆ ಸಂಕಲ್ಪ - Kishkindha Youth Trekking Team
ಗಂಗಾವತಿ : ಮಣ್ಣು ಸಂರಕ್ಷಿಸಿ ಮಳೆ ನೀರನ್ನು ಭೂಮಿಯೊಳಗೆ ಇಂಗಿಸುವ ಕಾರ್ಯವನ್ನು ಯುವ ಸಮೂಹವೊಂದು ಕೈಗೆತ್ತಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ. ಪ್ರತಿ ವಾರ ಗಂಗಾವತಿ ಸಮೀಪದಲ್ಲಿರುವ ಒಂದೊಂದು ಪ್ರದೇಶದತ್ತ ರೈಡಿಂಗ್, ಟ್ರಕ್ಕಿಂಗ್, ಸೈಕ್ಲಿಂಗ್ ಸೇರಿದಂತೆ ಹೊಸ - ಹೊಸ ಪ್ರದೇಶದ ಅನ್ವೇಷಣೆಗೆ ತೆರಳುವ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ಅಂಜನಾದ್ರಿ ಸುತ್ತಲಿನ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಿದ್ದಾರೆ.
ಈ ಹಿಂದೆ ಅಂಜನಾದ್ರಿ ಬೆಟ್ಟದ ಮೇಲಿನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದ್ದ ಚಾರಣ ಬಳದ ಯುವ ಸದಸ್ಯರು, ಇದೀಗ ಅಂಜನಾದ್ರಿ ಬೆಟ್ಟದ ಸುತ್ತಲಿನ ಪರಿಸರ ಸಂರಕ್ಷಣೆ, ಮಳೆ ನೀರಿನಿಂದ ಮಣ್ಣು ಮತ್ತು ಸಾರ ಕೊಚ್ಚಿ ಹೋಗದಂತೆ ತಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬೆಟ್ಟದ ಕೆಳಗೆ ಇರುವ ಪ್ರದರ್ಶನ ಪಥ ಮತ್ತು ರೈತರ ಹೊಲ ಗದ್ದೆಗಳಿಗೆ ನೀರು ಒದಗಿಸುವ ಉಪ ಕಾಲುವೆ ಸಮೀಪ 350 ಕ್ಕೂ ಹೆಚ್ಚು ತಾಳೆ ಮರದ ಬೀಜಗಳನ್ನು ಬಿತ್ತಿ, ಪರಿಸರ ಸಂರಕ್ಷಣೆ ಜೊತೆಗೆ ರೈತರ ಹಿತ ಕಾಯಲು ಮುಂದಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಯುವ ಚಾರಣ ಬಳಗದ ಸದಸ್ಯ ಅರ್ಜುನ್, ಕಾಲುವೆ ದಂಡೆಯ ಸಮೀಪ ಮತ್ತು ರೈತರ ಹೊಗದ್ದೆಗಳಲ್ಲಿ ಮಣ್ಣಿನ ಸಾರ ಕೊಚ್ಚಿ ಹೋಗದಂತೆ ತಡೆಯಲು ಮತ್ತು ಮಳೆ ನೀರು ಭೂಮಿಯೊಳಗೆ ಇಳಿದು ಹೋಗುವಂತೆ ಮಾಡುವ ಉದ್ದೇಶದಿಂದ ತಾಳೆ ಮರದ ಬೀಜಗಳನ್ನು ನಾಟಿ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ :ಉತ್ತರಕನ್ನಡದಲ್ಲಿ ವಿನೂತನ ಪ್ರಯೋಗ : ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಿದ ಅರಣ್ಯ ಇಲಾಖೆ