ಪ್ರಾಣ ಪಣಕ್ಕಿಟ್ಟು ಬೆಟ್ಟದ ಬಂಡೆಯಲ್ಲಿ ಸಿಲುಕಿದ್ದ ನಾಯಿ ರಕ್ಷಣೆ - ಬೆಟ್ಟದ ಬಂಡೆಯಲ್ಲಿ ಸಿಲುಕಿದ್ದ ನಾಯಿ ರಕ್ಷಣೆ
ಕುಲ್ಲು(ಹಿಮಾಚಲ ಪ್ರದೇಶ) : ಬೆಟ್ಟದಲ್ಲಿ ಸಿಲುಕ್ಕಿದ್ದ ನಾಯಿಯನ್ನು ಪ್ರಾಣವನ್ನೂ ಲೆಕ್ಕಿಸದೇ ರಕ್ಷಣೆ ಮಾಡಲಾಗಿದೆ. ಕುಲು ಜಿಲ್ಲೆಯ ಮಣಿಕರನ್ ಕಣಿವೆಯ ರುದ್ರನಾಗ್‌ನಲ್ಲಿ ಈ ಘಟನೆ ಜರುಗಿದೆ. ಜಿಲ್ಲೆಯ ಪ್ರಸಿದ್ಧ ಹಾವು ತಜ್ಞ ಸೋನು ಠಾಕೂರ್ ಅವರು ಬೆಟ್ಟದಿಂದ ಇಳಿದು ನಾಯಿಯನ್ನು ರಕ್ಷಿಸಿದ್ದಾರೆ. ಠಾಕೂರ್ ಅವರು ಬೆಟ್ಟದ ತುದಿಯಿಂದ ಹಗ್ಗದ ಸಹಾಯದಿಂದ ಕೆಳಗೆ ಇಳಿದು ನಂತರ ನಾಯಿಗೆ ಸ್ವಲ್ಪ ರೊಟ್ಟಿಗಳನ್ನು ತಿನ್ನಲು ನೀಡಿ, ನಂತರ ನಾಯಿಯನ್ನು ಅಲ್ಲಿಂದ ಮೇಲಕ್ಕೆ ಹೊತ್ತು ತಂದಿದ್ದಾರೆ. ಇವರ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Last Updated : Feb 3, 2023, 8:23 PM IST