ಬಿಜೆಪಿಯಿಂದ ಕೆಲವರು ಕಾಂಗ್ರೆಸ್‌ಗೆ ಬರ್ತಾರೆ, ಹೆಸರು ಹೇಳಲ್ಲ: ಸಿದ್ದರಾಮಯ್ಯ - ಸಿವಿಲ್ ಏವಿಯೇಷನ್ಗೆ ಶಿಫಾರಸು
ದಾವಣಗೆರೆ: ಬಿಜೆಪಿಯಿಂದ ಕೆಲವರು ಕಾಂಗ್ರೆಸ್‌ಗೆ ಬರಲಿದ್ದಾರೆ. ಅವರ ಹೆಸರನ್ನು ನಾನು ಹೇಳಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷಾಂತರ ಪರ್ವದ ಸುಳಿವು ನೀಡಿದರು. ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, ಬೇರೆ ಪಕ್ಷಗಳಿಂದ ಬರುತ್ತಾರೆ ಕಾದು ನೋಡಿ ಎಂದರು.
ಇದೇ ವೇಳೆ ಕೆಲವರು ಕಾಂಗ್ರೆಸ್ನಿಂದ ಬಿಜೆಪಿ ಸೇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಚಿವ ಬಿ.ಸಿ.ಪಾಟೀಲ್ ಕೂಡ ನಮ್ಮಲ್ಲೇ ಇದ್ದು, ಈಗ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯವರೇ ಕಾಂಗ್ರೆಸ್ ಸೇರಲಿದ್ದಾರೆ, ಕಾದು ನೋಡಿ ಎಂದು ಹೇಳಿದರು.
ಶಿವಮೊಗ್ಗ ಏರ್ಪೋರ್ಟ್ಗೆ ಯಡಿಯೂರಪ್ಪ ಹೆಸರು ನಾಮಕರಣ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಮೊದಲು ಹೆಸರು ಶಿಫಾರಸು ಮಾಡಬೇಕು. ರಾಜ್ಯ ಸರ್ಕಾರದವರು ಇದನ್ನು ಇನ್ನೂ ಮಾಡಿಲ್ಲ. ಬೆಳಗಾವಿ ಏರ್ಪೋರ್ಟ್ಗೆ ಕಿತ್ತೂರು ಚನ್ನಮ್ಮ, ಹುಬ್ಬಳ್ಳಿ ಏರ್ಪೋರ್ಟ್ಗೆ ಸಂಗೊಳ್ಳಿ ರಾಯಣ್ಣ ಹೆಸರಿಡಲು ತೀರ್ಮಾನ ಮಾಡಿದ್ದಾರೆ. ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು. ಎಂದರು.
ಇದನ್ನೂ ಓದಿ :ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ ಬಿಜೆಪಿ ರಾಜಕೀಯ ಗಿಮಿಕ್: ಪ್ರಸಾದ್ ಅಬ್ಬಯ್ಯ