ಒಂದು ಜೋಳಿಗೆಗೆ ನೋಟು ಇನ್ನೊಂದು ಜೋಳಿಗೆಗೆ ವೋಟು.. ಮತದಾರರ ಮುಂದೆ ಹೊರಟ ಬಿಜೆಪಿ ನಾಯಕ
ತುಮಕೂರು:ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯವಿರುವ ಠೇವಣಿ ಹಣಕ್ಕಾಗಿ ಮತ್ತು ಜನಾಭಿಪ್ರಾಯ ಸಂಗ್ರಹಕ್ಕೆ ಭಾನುವಾರ ಮಾಜಿ ಸಚಿವ ಸೊಗಡು ಶಿವಣ್ಣ ಎರಡು ಜೋಳಿಗೆ ಹಿಡಿದು ತುಮಕೂರು ನಗರದಲ್ಲಿ ವಿನೂತನ ಪ್ರಚಾರ ಆರಂಭಿಸಿದ್ದಾರೆ.
ನಗರದ ಎನ್.ಆರ್ ಕಾಲೋನಿಯ ಕಾಳಮ್ಮ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಠೇವಣಿ ಹಣವನ್ನು ಸಂಗ್ರಹಿಸಲು ಚಾಲನೆ ನೀಡಿದ ಸೊಗಡು ಶಿವಣ್ಣ ಅವರ ಜೋಳಿಗೆಗೆ ಜನರು ತಮ್ಮ ಕೈಲಾದಷ್ಟು ಹಣವನ್ನು ಹಾಕಿದರು. ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಕೂಡ ಬಿಜೆಪಿ ಅಭ್ಯರ್ಥಿ ಯಾರೆಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗಿದ್ದರು ಕೂಡ ಸೊಗಡು ಶಿವಣ್ಣ ತಮಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಿಂದ ವಿಭಿನ್ನವಾದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಒಂದು ಜೋಳಿಗೆಗೆ ನೋಟು, ಇನ್ನೊಂದು ಜೋಳಿಗೆಗೆ ವೋಟು: ಈಗಾಗಲೇ ಶಿವಣ್ಣ ಅವರು ಎರಡು ಜೋಳಿಗೆ ಹಿಡಿದು ಮತದಾರನ ಮುಂದೆ ಹೋಗುತ್ತಿದ್ದು, ಒಂದು ಜೋಳಿಗೆಗೆ ನೋಟು, ಇನ್ನೊಂದು ಜೋಳಿಗೆಗೆ ವೋಟು ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ತಮಟೆ ಬಾರಿಸಿಕೊಂಡು ಮತd ಜೋಳಿಗೆ ಹಿಡಿದು ಹೋಗುವುದಾಗಿ ಹೇಳಿದ್ದರು. ಠೇವಣಿಗಾಗಿ ಜನರಿಂದಲೇ ಹಣ ಸಂಗ್ರಹಿಸಲು ಜೋಳಿಗೆ ಹಿಡಿದಿದ್ದು, ಪ್ರತಿ ದಿನ ತುಮಕೂರು ನಗರದ ಒಂದೊಂದು ವಾರ್ಡ್ನಲ್ಲಿ ಓಡಾಡುತ್ತಾ ಪ್ರಚಾರ ನಡೆಸುತ್ತೇನೆ ಎಂದರು.
ಇದನ್ನೂ ಓದಿ:ಭಟ್ಕಳ ಮತ್ತು ಶಿರಸಿಯಲ್ಲಿ ಎಸ್ಡಿಪಿಐನಿಂದ ಅಭ್ಯರ್ಥಿ ಘೋಷಣೆ : ಕಾಂಗ್ರೆಸ್ ಮತ್ತು ಬಿಜೆಪಿಗೆ ಸೆಡ್ಡು