ನನಗೆ ಟಿಕೆಟ್ ಸಿಗುವುದು ಖಚಿತ: ಸೊಗಡು ಶಿವಣ್ಣ - ETV Bharat kannada News
ತುಮಕೂರು : 40 ವರ್ಷಗಳ ರಾಜಕೀಯ ಅನುಭವ ನನ್ನದು. ಹಾಗಾಗಿ ನೂರಕ್ಕೆ ನೂರರಷ್ಟು ನಾನೇ ಬಿಜೆಪಿ ಅಭ್ಯರ್ಥಿ. ನನಗೆ ಟಿಕೆಟ್ ಸಿಗುವುದು ಖಚಿತ ಎಂದು ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ. ತುಮಕೂರಿನಲ್ಲಿಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜನರು ಪ್ರತಿ ದಿನ ಟಿಕೆಟ್ ವಿಚಾರವಾಗಿ ನನಗೆ ಕರೆ ಮಾಡುತ್ತಿದ್ದು, ಆತಂಕದಲ್ಲಿದ್ದಾರೆ. ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದ ಪತ್ರಿಕಾಗೋಷ್ಟಿ ಕರೆದಿದ್ದೇನೆ ಎಂದು ಹೇಳಿದರು.
ಚುನಾವಣೆಗೆ ಪ್ರಚಾರ ಮಾಡಲು ಅನುಮತಿ ಕೋರಿದ್ದು, ನಾಮಿನೇಷನ್ ಫೈಲ್ ಮಾಡಲು ಸಿದ್ದತೆ ನಡೆಸಿಕೊಳ್ಳಲಾಗಿದೆ. ಭ್ರಷ್ಟಾಚಾರದ ಕಪ್ಪು ಚುಕ್ಕೆ ನನ್ನಲ್ಲಿಲ್ಲ. ಇದಕ್ಕಾಗಿ ಜನರ ಬಳಿ ಎರಡು ಜೋಳಿಗೆ ಹಾಕಿಕೊಂಡು ಹೋಗುತ್ತಿದ್ದೇನೆ. ಒಂದರಲ್ಲಿ ಅವರ ವೋಟು, ಇನ್ನೊಂದರಲ್ಲಿ ನೋಟು ಹಾಕಿ ಎಂದು ಕೇಳುತ್ತಿದ್ದೇನೆ. ಪ್ರಜಾಪ್ರಭುತ್ವ ಉಳಿಸಲು ನನ್ನ ಜೊತೆ ಬಂದು ಪ್ರಚಾರ ಮಾಡಲಿ ಎಂದು ಹೇಳಿದರು.
ಇದನ್ನೂ ಓದಿ :ಇಂದು 150 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ.. ಈಶ್ವರಪ್ಪಗೆ ಸ್ಪರ್ಧಿಸಲು ಹೇಳಿದ್ದೇವು ಎಂದ ಸಿಎಂ