ಕಾವಿಗೆ ಕುಳಿತ ಕೋಳಿ ಸಾಯಿಸಿ 9 ಮೊಟ್ಟೆ ನುಂಗಿದ ನಾಗರಹಾವು: ವಿಡಿಯೋ - Cobra swallowed 9 eggs
ಶಿವಮೊಗ್ಗ: ಕಾವಿಗೆ ಕುಳಿತಿದ್ದ ಕೋಳಿಯನ್ನು ಸಾಯಿಸಿ 9 ಮೊಟ್ಟೆಗಳನ್ನು ನುಂಗಿದ್ದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಅವರು ಭದ್ರಾವತಿ ತಾಲೂಕಿನ ಪದ್ಮೇನಹಳ್ಳಿಯಲ್ಲಿ ರಕ್ಷಿಸಿದ್ದಾರೆ. ಮಣಿಕಂಠ ಎಂಬವರ ಮನೆಯಲ್ಲಿ ಮರಿ ಮಾಡಲು ಕೋಳಿ ಕಾವಿಗೆ ಕುಳಿತಿತ್ತು. ಕೋಳಿ ಗೂಡಿಗೆ ನುಗ್ಗಿದ ಹಾವು ಕಾವಿಗೆ ಕುಳಿತ ಕೋಳಿ ಮತ್ತು ತಡೆಯಲು ಬಂದ ಇನ್ನೊಂದು ಕೋಳಿಯನ್ನು ಕಚ್ಚಿ ಸಾಯಿಸಿದೆ. ಮೊಟ್ಟೆಗಳನ್ನು ನುಂಗಿದೆ.
ಹಾವು ಕೋಳಿ ಗೂಡಿನಲ್ಲಿದ್ದ 20 ಮೊಟ್ಟೆಗಳಲ್ಲಿ 9 ಮೊಟ್ಟೆಯನ್ನು ನುಂಗಿದ್ದು, ಒಂದು ಮೊಟ್ಟೆಯನ್ನು ಕಚ್ಚಿ ಒಡೆದು ಹಾಕಿದೆ. ಇದನ್ನು ನೋಡಿ ಭಯಗೊಂಡು ಮಣಿಕಂಠ ತಕ್ಷಣ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅವರು ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ. ನುಂಗಿದ್ದ ಮೊಟ್ಟೆಗಳನ್ನು ಒಂದೊಂದಾಗಿ ನಾಗರಹಾವು ಕಕ್ಕಿದೆ. ಹಾವು ಮೊಟ್ಟೆಗಳನ್ನು ಹೊರ ಹಾಕಿದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹಾವು ಸುರಕ್ಷಿತವಾಗಿ ಕಾಡು ಸೇರಿದೆ.
ಇದನ್ನೂ ಓದಿ:ಬಾಟಲಿಯಿಂದ ಸರತಿ ಸಾಲಿನಲ್ಲಿ ನೀರು ಕುಡಿದ ಎರಡು ನಾಗರಹಾವುಗಳು: ವಿಡಿಯೋ ವೈರಲ್ವೈರಲ್ ಆಗಿದೆ.