ಬೆಂಗಳೂರು - ಹೌರಾ ದುರಂತೋ ಎಕ್ಸ್ಪ್ರೆಸ್ ರೈಲಿನಲ್ಲಿ ದಟ್ಟ ಹೊಗೆ.. ವಿಡಿಯೋ - smoke in Duronto Express
ಚಿತ್ತೂರು (ಆಂಧ್ರ ಪ್ರದೇಶ): ಬೆಂಗಳೂರಿನಿಂದ ಪಶ್ಚಿಮ ಬಂಗಾಳದ ಹೌರಾಕ್ಕೆ ತೆರಳುತ್ತಿದ್ದ ದುರಂತೋ ಎಕ್ಸ್ಪ್ರೆಸ್ ರೈಲಿನ ಎಸ್-9 ಬೋಗಿಯಲ್ಲಿ ದಟ್ಟ ಹೊಗೆ ಕಾಣಿಸಿಕೊಂಡ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ದಟ್ಟ ಹೊಗೆಯಿಂದಾಗಿ ಎಚ್ಚೆತ್ತ ಸಿಬ್ಬಂದಿ ಇಲ್ಲಿನ ಕುಪ್ಪಂ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ರೈಲಿನಿಂದ ಇಳಿದು ಓಡಿದ್ದಾರೆ. ಹೊಗೆ ನಂದಿಸಿದ ನಂತರ ರೈಲು ಪುನಾರಂಭವಾಗಿದೆ.
Last Updated : Feb 3, 2023, 8:33 PM IST