ಸೇಡಂನಲ್ಲಿ ಸಚಿವ ಅಶೋಕ್ ಗ್ರಾಮ ವಾಸ್ತವ್ಯ: ಗಾಯಕಿ ಮಂಗ್ಲಿ ಹಾಡಿಗೆ ಪ್ರೇಕ್ಷಕರು ಖುಷ್ - Singer Mangli program
ಕಲಬುರಗಿ: ಕಂದಾಯ ಸಚಿವ ಆರ್.ಅಶೋಕ್ ಸೇಡಂ ತಾಲೂಕಿನ ಅಡಕಿ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಹೂಡಿದ್ದರು. ಖ್ಯಾತ ಗಾಯಕಿ ಮಂಗ್ಲಿ ಸೇರಿದಂತೆ ಅನೇಕ ಕಲಾವಿದರಿಂದ ಈ ವೇಳೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ಜರುಗಿದವು. ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವ, ಪತ್ರಕರ್ತ ಗೋಪಾಲ ಕುಲಕರ್ಣಿ ಕೂಡಾ ಹಾಡುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಅವರ ಧರ್ಮಪತ್ನಿ ಸಂತೋಷಿರಾಣಿ ಪಾಟೀಲ ಅವರು ನಟ ಪುನಿತ್ ರಾಜ್ಕುಮಾರ ಅಭಿನಯದ 'ರಾಜಕುಮಾರ' ಚಿತ್ರದ ಬೊಂಬೆ ಹೇಳುತೈತೆ ಹಾಡು ಹಾಡಿ ಅಗಲಿದ ಅಪ್ಪುವಿಗೆ ಗೌರವ ಸಮರ್ಪಿಸಿದರು. ಗಾಯಕಿ ಮಂಗ್ಲಿ ಹಾಡುಗಳಿಗೆ ಸ್ಥಳೀಯರು, ಮಕ್ಕಳು ಕುಣಿದು ಖುಷಿಪಟ್ಟರು.
Last Updated : Feb 3, 2023, 8:27 PM IST