ಕರ್ನಾಟಕ

karnataka

ಸುತ್ತೂರು ಶ್ರೀ ಕ್ಷೇತ್ರಕ್ಕೆ ಕುಟುಂಬ ಸಮೇತ ಹಂಸಲೇಖ ಭೇಟಿ ..

ETV Bharat / videos

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಾದಬ್ರಹ್ಮ ಹಂಸಲೇಖ - ವಿಡಿಯೋ - ಶ್ರೀಗಳ ಆಶೀರ್ವಾದ ಪಡೆದ ನಾದಬ್ರಹ್ಮ ಹಂಸಲೇಖ

By ETV Bharat Karnataka Team

Published : Oct 14, 2023, 8:39 PM IST

ಮೈಸೂರು:ನಂಜನಗೂಡು ತಾಲೂಕಿನ ಸುತ್ತೂರಿನ ಶ್ರೀ ಕ್ಷೇತ್ರಕ್ಕೆ ಇಂದು ದಸರಾ ಉದ್ಘಾಟಕರಾಗಿರುವ ಹಂಸಲೇಖ ಅವರು ಕುಟುಂಬ ಸಮೇತ ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ನಾಡಹಬ್ಬ ದಸರಾ ಮಹೋತ್ಸವ- 2023ರ ಉದ್ಘಾಟಕರಾದ ನಾದಬ್ರಹ್ಮ ಹಂಸಲೇಖ ಭಾನುವಾರ ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಮೈಸೂರಿಗೆ ಆಗಮಿಸಿದರು. ಈ ವೇಳೆ ನೇರವಾಗಿ ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಮಠಕ್ಕೆ ಮೊದಲು ಕುಟುಂಬ ಸಮೇತ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.

ಸುತ್ತೂರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಹಂಸಲೇಖ ಅವರಿಗೆ ಶಾಲಾ ಮಕ್ಕಳಿಂದ ಸಾಂಪ್ರದಾಯಿಕವಾಗಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಇದೇ ಸಂದರ್ಭದಲ್ಲಿ ಹಂಸಲೇಖ ಅವರನ್ನು ಜಿಲ್ಲಾಡಳಿತದ ವತಿಯಿಂದಲೂ ಸಹ ಸ್ವಾಗತ ನೀಡಲಾಯಿತು. ಇಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿರುವ ಹಂಸಲೇಖ ಅವರು ನಾಳೆ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ. ಅಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಿ ನಂತರ ವೇದಿಕೆಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.

ಇದನ್ನೂಓದಿ:ತುಂಗಭದ್ರ ಜಲಾಶಯದ ಸದ್ಯದ ನೀರಿನ ಪ್ರಮಾಣ ಎಷ್ಟು? ಇಲ್ಲಿದೆ ಈಟಿವಿ ಭಾರತದ ಪ್ರತ್ಯಕ್ಷ ವರದಿ

ABOUT THE AUTHOR

...view details