ಕರ್ನಾಟಕ

karnataka

ನೃತ್ಯ ಮಾಡುತ್ತಿರುವ ಸಿಂಗಾಪುರದ ಹೈಕಮಿಷನರ್ ಸೈಮನ್​ ವಾಂಗ್

ETV Bharat / videos

ಜಾನಪದ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಸಿಂಗಾಪುರದ ಹೈಕಮಿಷನರ್-ವಿಡಿಯೋ - G20

By

Published : Apr 2, 2023, 1:34 PM IST

ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ) :ಡಿಸೆಂಬರ್ 1, 2022 ರಂದು ಜಿ-20 ಅಧ್ಯಕ್ಷತೆ ವಹಿಸಿಕೊಂಡ ಭಾರತ ನವೆಂಬರ್ 30, 2023 ರವರೆಗೆ ಮಹತ್ವದ ಸ್ಥಾನವನ್ನು ನಿಭಾಯಿಸಲಿದೆ. ಭಾರತದಲ್ಲಿರುವ 50 ಪ್ರಮುಖ ನಗರಗಳಲ್ಲಿ ವರ್ಕಿಂಗ್​ ಗ್ರೂಪ್​ ಸಭೆಗಳು ನಡೆಯುತ್ತಿವೆ. ಅದರಂತೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಶನಿವಾರ ನಡೆದ ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಕುತೂಹಲದ ವಿಶೇಷ ಘಟನೆ ನಡೆಯಿತು. 

ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಸಿಂಗಾಪುರದ ಹೈಕಮಿಷನರ್ ಸೈಮನ್​ ವಾಂಗ್ ಅವರು ಇಲ್ಲಿನ ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡಿ ಗಮನ ಸೆಳೆದರು. ಇದರ ವಿಡಿಯೋವನ್ನು ಸ್ವತಃ ಸೈಮನ್​ ವಾಂಗ್ ಅವರೇ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋಗೆ ಜಿ20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಇದೊಂದು ಅದ್ಭುತ ಸಂಜೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಹೈ ಕಮಿಷನರ್ ಸೈಮನ್ ವಾಂಗ್ ಜಾನಪದ ಕಲಾವಿದರೊಂದಿಗೆ ಅವರಂತೆ ಹಾಡಿನ ತಾಳಕ್ಕೆ ಕುಣಿದಿದ್ದಾರೆ. ವಿಡಿಯೋ 30 ಸಾವಿರಕ್ಕಿಂತ ಹೆಚ್ಚು ವೀಕ್ಷಣೆ ಪಡೆದಿದೆ.

ಇದನ್ನೂ ಓದಿ:ಜಿ20 ಪ್ರತಿನಿಧಿಗಳಿಂದ ಯೋಗಾಭ್ಯಾಸ- ವಿಡಿಯೋ

ABOUT THE AUTHOR

...view details