ಕರ್ನಾಟಕ

karnataka

ಸಿದ್ಧಾರೂಢ ಶ್ರೀಗಳ ಜಲರಥೋತ್ಸವ ಸಂಭ್ರಮ: ವಿಡಿಯೋ

ETV Bharat / videos

ಸಿದ್ಧಾರೂಢ ಶ್ರೀಗಳ ಜಲರಥೋತ್ಸವ ಸಂಭ್ರಮ: ವಿಡಿಯೋ - etv bharat kannada

By ETV Bharat Karnataka Team

Published : Sep 1, 2023, 10:58 PM IST

ಹುಬ್ಬಳ್ಳಿ:  ಉತ್ತರ ಕರ್ನಾಟಕದ ಆರಾಧ್ಯದೈವ ಶ್ರೀ ಸಿದ್ಧಾರೂಢರ 94ನೇ ಪುಣ್ಯಾರಾಧನೆ ಅಂಗವಾಗಿ ಸಿದ್ಧಾರೂಢ ಮಠದಲ್ಲಿಂದು ಜಲರಥೋತ್ಸವ ಸಂಭ್ರಮದಿಂದ ಜರುಗಿತು. ಪುಣ್ಯಾರಾಧನೆ ಅಂಗವಾಗಿ ಮಠದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಜರುಗಿದ ಜಲರಥೋತ್ಸವವನ್ನು (ತೆಪ್ಪೋತ್ಸವ) ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಶ್ರಾವಣ ಮಾಸದಲ್ಲಿ ವಿಶಿಷ್ಟ ರೀತಿಯ ಜಲರಥೋತ್ಸವವನ್ನು ಆಚರಿಸಲಾಗುತ್ತದೆ. ತೆಪ್ಪೋತ್ಸವದ ವೇಳೆ ಭಕ್ತರು ಸಿದ್ಧಾರೂಢ ಮಹಾರಾಜ ಕೀ ಜೈ ಎಂಬ ಜಯಘೋಷಗಳನ್ನು ಮೊಳಗಿಸಿದರು.

ಹಾವೇರಿಯಲ್ಲಿ ವೈಭವದ ತೆಪ್ಪೋತ್ಸವ:ಮತ್ತೊಂದೆಡೆ, ಹಾವೇರಿ ಜಿಲ್ಲೆಯ ಕೋಣನತಂಬಿಗೆ ಗ್ರಾಮದಲ್ಲಿ ಪ್ರತಿ ವರ್ಷ ನೂಲು ಹುಣ್ಣಿಮೆಯಂದು ವಿಶಿಷ್ಟ ತೆಪ್ಪೋತ್ಸವ ನಡೆಯುತ್ತದೆ. ಈ ಗ್ರಾಮದ ಪಕ್ಕದಲ್ಲಿ ತುಂಬಿ ಹರಿಯುವ ವರದಾ ನದಿಯಲ್ಲಿ ಉತ್ಸವ ನಡೆಸಲಾಗುತ್ತದೆ. ಇಂದು ರಭಸವಾಗಿ ಮೈದುಂಬಿ ಹರಿಯುವ ನದಿಯಲ್ಲಿ ತೆಪ್ಪೋತ್ಸವ ಮಾಡುವ ಮೂಲಕ ಭಕ್ತರು ಸಂಭ್ರಮಿಸಿದರು. ಗ್ರಾಮದ ಕಲ್ಮೇಶ್ವರ ಮತ್ತು ಸಿದ್ದಾರೂಢರ ಮೂರ್ತಿಗಳನ್ನು ತೆಪ್ಪದಲ್ಲಿಟ್ಟು ಉತ್ಸವ ಮಾಡಲಾಗುತ್ತದೆ. ತಳಿರು ತೋರಣಗಳಿಂದ ಸಿಂಗರಿಸಿದ ರಥವನ್ನು ಗ್ರಾಮದಲ್ಲಿನ ಕಲ್ಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಮಾಡಲಾಯಿತು. ಸಿಂಗರಿಸಿದ ರಥವನ್ನು ಡೊಳ್ಳು ಭಜನೆ ಜಾಂಜ್ ವಾದ್ಯ ಮೇಳದೊಂದಿಗೆ ಕೋಣನತಂಬಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ನದಿ ಪಕ್ಕದಲ್ಲಿರುವ ಆಂಜನೇಯ ದೇವಸ್ಥಾನದ ಮುಂದೆ ತೆಪ್ಪದ ಮೇಲೆ ರಥವಿಟ್ಟು ಉತ್ಸವ ಆಚರಿಸಲಾಯಿತು.

ಇದನ್ನೂ ಓದಿ:ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಅದ್ಧೂರಿಯಾಗಿ ನಡೆದ ಗಿರಿಜಾ ಕಲ್ಯಾಣದ ತೆಪ್ಪೋತ್ಸವ- ವಿಡಿಯೋ

ABOUT THE AUTHOR

...view details