ಕಾಂಗ್ರೆಸ್ ಪಕ್ಷ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು, ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತದೆ:ಸಿದ್ದರಾಮಯ್ಯ - etv bharat kannada
ಮೈಸೂರು: ಕಾಂಗ್ರೆಸ್ ಪಕ್ಷ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು, ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಮತನಾಡಿದ ಅವರು ಕಾಂಗ್ರೆಸ್ ಪಕ್ಷ ನಮ್ಮ ಲೆಕ್ಕಾಚಾರದಂತೆ ಮುನ್ನಡೆ ಸಾಧಿಸಿದೆ, ನಾವು ಬಿಜೆಪಿಗೆ 65 ರಿಂದ 70 ಬರುತ್ತದೆ ಎಂದು ಅಂದಾಜು ಮಾಡಿದ್ದೆವು, ಈಗ ಅದೇ ರೀತಿಯ ಟ್ರೆಂಡ್ ಇದೆ ಎಂದರು.
ನಾವು 120ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಅಂದಾಜು ಮಾಡಿದ್ದೆವು, ಅದೇ ರೀತಿಯ ಟ್ರೆಂಡ್ ಇದೆ. ಜೆಡಿಎಸ್ 25 ರಿಂದ 26 ಬರಬಹುದು ಎಂದು ಎಂದುಕೊಂಡಿದ್ದೆವು, ಅದೇ ರೀತಿಯಾಗಿದೆ. ಕಾಂಗ್ರೆಸ್ ಪಕ್ಷ 120ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ಗೆಲ್ಲುತ್ತದೆ. ಇನಿಷಿಯಲ್ ಸ್ಟೇಜ್ನಲ್ಲಿ 5 ರಿಂದ 6 ಸುತ್ತು ಮತ ಎಣಿಕೆ ನಡೆದಿದೆ. ಇನ್ನೂ ಹೆಚ್ಚಿನ ಸುತ್ತುಗಳ ಮತ ಎಣಿಕೆ ನಡೆಯಬೇಕಿದೆ. ಆದರಿಂದ, ಕಾಂಗ್ರೆಸ್ ಪಕ್ಷ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ವರುಣದಲ್ಲಿ 5-6 ಸುತ್ತು ಮತ ಎಣಿಕೆ ನಡೆದಿದೆ. 8 ಸಾವಿರ ಲೀಡ್ ಇದೆ. ಇನ್ನೂ ಹೆಚ್ಚು ಲೀಡ್ ಬರುತ್ತದೆ. ಚಾಮರಾಜನಗರದಲ್ಲಿ ಪುಟ್ಟರಂಗ ಶೆಟ್ಟಿ ಕೂಡ ಗೆಲ್ಲುತ್ತಾರೆ. ಸೋಮಣ್ಣ ಅವರು ಎರಡು ಕ್ಷೇತ್ರಗಳಲ್ಲಿ ಸೋಲುತ್ತಾರೆ. ನಾನು ಹೇಳುತ್ತಿದ್ದೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಎಷ್ಟೇ ಬಾರಿ ರಾಜ್ಯಕ್ಕೆ ಬಂದರು ರಾಜ್ಯದ ಜನರ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಯಾಕಂದ್ರೆ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ, ಜನವಿರೋಧಿ ನೀತಿ, ಅಭಿವೃದ್ದಿ ಮಾಡದೇ ಇರುವುದರಿಂದ ಜನರು ಬೇಸತ್ತಿದ್ದಾರೆ. ಜನ ಬದಲಾವಣೆ ಬಯಸುತ್ತಿದ್ದಾರೆ ಎಂದು ನಾನು ಹೇಳುತ್ತಿದ್ದೆ ಬಹುಷ ಜನ ಅದೇ ರೀತಿ ತೀರ್ಪು ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ:ಕನಕಪುರದಲ್ಲಿ ಡಿಕೆಶಿಗೆ 8ನೇ ಗೆಲುವು: ಆರ್.ಅಶೋಕ್ ವಿರುದ್ಧ 50ಕ್ಕೂ ಹೆಚ್ಚು ಮತಗಳಿಂದ ಜಯಭೇರಿ!