ಕರ್ನಾಟಕ

karnataka

ಸಿಚುವಾನ್​ ಟಕಿನ್​

ETV Bharat / videos

13 ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡ ಅಪರೂಪದ ಕುರಿ ಸಿಚುವಾನ್​ ಟಕಿನ್ : ಇಲ್ಲಿದೆ ವಿಡಿಯೋ

By

Published : Aug 2, 2023, 9:14 AM IST

ತೇಜ್​ಪುರ್ (ಅರುಣಾಚಲ ಪ್ರದೇಶ):ಸಿಚುವಾನ್ ಟಕಿನ್ (ಬುಡೋರ್ಕಾಸ್ ಟ್ಯಾಕ್ಸಿಕಲರ್) ಎಂದು ಕರೆಯಲ್ಪಡುವ ಅಪರೂಪದ ಕುರಿ ತಳಿಯ ಪ್ರಾಣಿಯೊಂದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಚಿಕ್ಕದಾದ ಕೊಂಬುಗಳನ್ನು ಹೊಂದಿರುವ ದೊಡ್ಡಗಾತ್ರದ ಕುರಿ ಇದಾಗಿದೆ. ಸಾಮಾನ್ಯವಾಗಿ ಟಿಬೆಟ್ ಮತ್ತು ಚೀನಾದ ಸಿಚುವಾನ್, ಗನ್ಸು ಮತ್ತು ಕ್ಸಿನ್ಜಿಯಾಂಗ್ ಪ್ರಾಂತ್ಯಗಳಲ್ಲಿ ಇದು ಕಂಡು ಬರುತ್ತದೆ.  2009ರಲ್ಲಿ ಕಂಡಿದ್ದ ಇದು 13 ವರ್ಷಗಳ ಬಳಿಕ ಅರುಣಾಚಲದ ಭಾರತ-ಭೂತಾನ್​ಗಡಿ ಪ್ರದೇಶದ ರಸ್ತೆ ಮೇಲೆ ಕಾಣಿಸಿಕೊಂಡಿದೆ. 

ಸಿಚುವಾನ್​ ಟಕಿನ್​ನ ಚಿತ್ರ ಮತ್ತು ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ. ಇದು ಜುಲೈ 22 ಮತ್ತು 23 ರಂದು ಬೇರೆ ಬೇರೆ ಪ್ರದೇಶಗಳಲ್ಲಿ ಕಂಡು ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೊದಲಿಗೆ ಯೂಸುಮ್ ಗ್ರಾಮದ ಬಳಿಯ ತವಾಂಗ್-ಚು ನದಿಯ ಬಳಿ ಕಂಡು ಬಂದಿತ್ತು. ಇದೀಗಾ ರಸ್ತೆ ಮೇಲೆ ಕಂಡು ಬಂದಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಅಪರೂಪದ ಸಿಚುವಾನ್​ ಟಕಿನ್​ನ​ ಹುಡುಕಾಟ ಆರಂಭಿಸಿದ್ದಾರೆ. ಈ ಕುರಿತು ಅರಣ್ಯಧಿಕಾರಿ ತೇಜ್​ ಹನಿಯ ಪ್ರತಿಕ್ರಿಯೆ ನೀಡಿ, ಈ ಅಪರೂಪದ ಕುರಿಯ ದೃಶ್ಯಗಳನ್ನು ಸ್ಥಳೀಯರು ಸೆರೆ ಹಿಡಿದಿದ್ದು, ನಮಗೆ ಮಾಹಿತಿ ಲಭ್ಯವಾಗಿದೆ.  ಸಿಚುವಾನ್ ಟಕಿನ್ (ಬುಡೋರ್ಕಾಸ್ ಟ್ಯಾಕ್ಸಿಕಲರ್) ಇದನ್ನು ಅಪರೂಪದ ಪ್ರಭೇದ ಎಂದು ಪರಿಗಣಿಸಲಾಗಿದೆ. ಇದು ಹೆಚ್ಚಾಗಿ ಭೂತಾನ್, ಚೀನಾ ಮತ್ತು ಟಿಬೆಟ್ ಪ್ರದೇಶಗಳಲ್ಲಿ ವಾಸಿಸುತ್ತದೆ. 

ಸಿಚುವಾನ್​ ಟಕಿನ್​ನ ವಿವಿಧ ಹೆಸರುಗಳು:ಇದನ್ನು ನಾಲ್ಕು ಹೆಸರಗಳಿಂದ ಕರೆಯಲಾಗುತ್ತದೆ. ಭೂತಾನ್ ಟಕಿನ್, ಟಿಬೆಟ್ ಟಕಿನ್, ಗೋಲ್ಡನ್ ಟಕಿನ್ ಮತ್ತು ಮಿಶಿಮಿ ಟಕಿನ್, ಸಿಚುವಾನ್ ಟಕಿನ್ ಎಂದು ಕರೆಯಲಾಗುತ್ತದೆ.  2009 ರಲ್ಲಿ ಅರುಣಾಚಲ ಪ್ರದೇಶದ ಪೂರ್ವ ಹಿಮಾಲಯ ಪ್ರಾಂತ್ಯದ ಯಿಂಗ್‌ಕಿಯಾಂಗ್‌ನಲ್ಲಿ ಇದು ಪ್ರತ್ಯಕ್ಷವಾಗಿತ್ತು. ಇದೀಗ ರಸ್ತೆ ಮೇಲೆ ಕಂಡು ಬಂದಿದ್ದು ಸಂತಸದ ವಿಷವಾಗಿದೆ. ಪ್ರಸ್ತುತ, ಅರಣ್ಯ ಇಲಾಖೆ ಈ ಅಪರೂಪದ ಪ್ರಾಣಿಯನ್ನು ಸಂರಕ್ಷಿಸುವ ಬಗ್ಗೆ ಹಾಗೂ ಜಾಗೃತಿ ಮೂಡಿಸಲು ಸ್ಥಳೀಯ ಸಮುದಾಯಗಳೊಂದಿಗೆ ತೊಡಗಿಸಿಕೊಂಡಿದೆ. ಸಿಚುವಾನ್​ ಟಕಿನ್​ಗೆ ಸಂಬಂಧಿಸಿದ ದೃಶ್ಯಗಳು ಮತ್ತು ಅದರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ಇಲಾಖೆಗೆ ತಿಳಿಸಲು ಸೂಚಿಸಲಾಗಿದೆ. ಹಾಗೇ ಅಪರೂಪದ ತಳಿಯನ್ನು ಪತ್ತೆ ಹಚ್ಚಲು ಡ್ರೋನ್‌ಗಳು ಮತ್ತು ಇತರ ಸಾಧನಗಳನ್ನು ಬಳಸಲು ಇಲಾಖೆ ಯೋಜಿಸುತ್ತಿದೆ ಎಂದು ಮಾಧ್ಯಮಕ್ಕೆ ತಿಳಿಸಿದರು.  

ಇದನ್ನೂ ಓದಿ:ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಸಮೀಕ್ಷೆಯಲ್ಲಿ ಅಪರೂಪದ ಪ್ರಾಣಿ, ಪಕ್ಷಿಗಳು ಪತ್ತೆ!

ABOUT THE AUTHOR

...view details