ದೊಡ್ಡಬಳ್ಳಾಪುರದಲ್ಲಿ ಸರಣಿ ಕಳ್ಳತನ: ಖದೀಮನ ಕೃತ್ಯ ಸಿಸಿಟಿವಿಯಲ್ಲಿ ಸೆರೆ - etv bharat kannada
ದೊಡ್ಡಬಳ್ಳಾಪುರ : ಮೆಡಿಕಲ್ ಸ್ಟೋರ್, ಮೊಬೈಲ್ ಸೆಂಟರ್ ಮತ್ತು ನಂದಿನಿ ಹಾಲಿನ ಕೇಂದ್ರಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಎಳ್ಳುಪುರ ಗೇಟ್ ಬಳಿಯ ಅಂಗಡಿಗಳಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ಅಂಗಡಿಗಳಿಗೆ ನುಗ್ಗಿರುವ ಕಳ್ಳ ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣ ಮತ್ತು ಮೊಬೈಲ್ಗಳನ್ನು ಕದ್ದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Last Updated : Feb 3, 2023, 8:36 PM IST