ಕರ್ನಾಟಕ

karnataka

ಬೃಹತ್ ಶಿವಲಿಂಗ

By

Published : Feb 17, 2023, 6:10 PM IST

ETV Bharat / videos

5 ಲಕ್ಷ ರುದ್ರಾಕ್ಷಿಯಿಂದ ಮೈದಳೆದ 21 ಅಡಿ ಎತ್ತರದ ಶಿವಲಿಂಗ: ವಿಡಿಯೋ

ಮೈಸೂರು : ಶಿವ ದೇಗುಲಗಳಲ್ಲಿ ಮಹಾಶಿವರಾತ್ರಿಯ ಸಿದ್ಧತೆ ನಡೆಯುತ್ತಿದೆ. ಮೈಸೂರಿನ ಲಲಿತ್ ಮಹಲ್ ಮೈದಾನದಲ್ಲಿ 5,16,108 ರುದ್ರಾಕ್ಷಿಗಳಿಂದ ಸುಮಾರು 21 ಅಡಿ ಎತ್ತರದ ಬೃಹತ್ ಶಿವಲಿಂಗವನ್ನು 3ಡಿ ಮಾದರಿಯಲ್ಲಿ ನಿರ್ಮಿಸಲಾಗಿದೆ. ವಿಶೇಷ ಶಿವಲಿಂಗ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

ಶಿವಲಿಂಗದ ಸುತ್ತಲೂ ಹಿಮಚ್ಚಾದಿತ ಕೈಲಾಸ ಪರ್ವತವಿದೆ. ಇದಕ್ಕಾಗಿ ಪಿಒಪಿ, ಮರದ ಕಟ್ಟಿಗೆ, ಗೋಣಿ ಬಳಸಲಾಗಿದೆ. 100×100 ಪ್ರದೇಶದಲ್ಲಿರುವ ಶಿವಲಿಂಗವನ್ನು ನಿರ್ಮಿಸಲು 50ಕ್ಕೂ ಹೆಚ್ಚು ಮಂದಿ ಒಂದು ವಾರಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. 

"ದ್ವಾದಶ ಲಿಂಗದ ಮಾದರಿಯನ್ನೂ ಪ್ರತಿಷ್ಠಾಪಿಸಲಾಗಿದೆ. ಜನರು ಶಿವರಾತ್ರಿ ಪ್ರಯುಕ್ತ ಹಿಮಾಲಯ, ಕೇದಾರನಾಥ, ಕಾಶಿ ವಿಶ್ವನಾಥನ ಸನ್ನಿಧಾನಗಳಿಗೆ ತೆರಳುತ್ತಾರೆ. ಬಡವರು ಮತ್ತು ಯಾತ್ರಾಸ್ಥಳಗಳಿಗೆ ತೆರಳಲು ಸಾಧ್ಯವಾಗದೇ ಇರುವವರು ಇಲ್ಲಿ ಬಂದು ದರ್ಶನ ಪಡೆಯಬಹುದು" ಎಂದು ಆಯೋಜಕರಾದ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಬಿ.ಕೆ.ರಂಗನಾಥ್ ತಿಳಿಸಿದರು.

ಇದನ್ನೂ ಓದಿ:ಲಡ್ಡು ಪರ್ವತ! ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮಕ್ಕೆ 3.5 ಲಕ್ಷ ಲಡ್ಡು ತಯಾರಿ

ABOUT THE AUTHOR

...view details