ಕರ್ನಾಟಕ

karnataka

ಶಿವಾನಂದ ಮುತ್ತಣ್ಣವರ

ETV Bharat / videos

ಹೇಳಿಕೆ ವಾಪಸ್​ ಪಡೆಯದಿದ್ದಲ್ಲಿ ಉಗ್ರ ಹೋರಾಟ: ಹೆಚ್​ಡಿಕೆಗೆ ಶಿವಾನಂದ ಮುತ್ತಣ್ಣವರ ವಾರ್ನಿಂಗ್​​ - etv bharat kannada

By

Published : Feb 7, 2023, 7:58 PM IST

Updated : Feb 14, 2023, 11:34 AM IST

ಹುಬ್ಬಳ್ಳಿ:ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುರಿತ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಪಸ್ ಪಡೆಯಬೇಕು.‌ ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಸಂಯೋಜಕ ಶಿವಾನಂದ ಮುತ್ತಣ್ಣವರ ಎಚ್ಚರಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪೇಶ್ವೆಗೆ ಜೋಶಿ ಅವರನ್ನು ಹೋಲಿಕೆ ಮಾಡಿದ್ದು ಬಹಳ ಖಂಡನೀಯವಾಗಿದೆ. ಇದು ಕುಮಾರಸ್ವಾಮಿ ಮಾಡಿರುವ ದೊಡ್ಡ ಅಪರಾಧ. ಪ್ರಹ್ಲಾದ್ ಜೋಶಿ ನವಗ್ರಹ ಯಾತ್ರೆ ಮಾಡಿ ಎಂದಿರೋದು ಸತ್ಯ. ಅವರು ಸರಿಯಾದ ರೀತಿಯಲ್ಲಿ‌ ಮಾತನಾಡಿದ್ದಾರೆ. ಆದರೆ, ಕುಮಾರಸ್ವಾಮಿ ಆರೋಪ ಅಕ್ಷಮ್ಯ ಅಪರಾಧವಾಗಿದೆ" ಎಂದರು. "ಕುಮಾರಸ್ವಾಮಿ ಹೇಳಿಕೆ ಅತ್ಯಂತ ಅಪಮಾನಕರವಾಗಿದ್ದು, ಜೋಶಿ ಕುರಿತ ಹೇಳಿಕೆ ವಾಪಾಸ್ ಪಡೆಯಬೇಕು. ಇಲ್ಲವಾದಲ್ಲಿ ಹುಬ್ಬಳ್ಳಿ ನಗರದಲ್ಲಿ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ" ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಅವರಷ್ಟು ಸಾಮರ್ಥ್ಯವಿಲ್ಲ: ಹೆಚ್​ಡಿಕೆ ಟ್ವೀಟ್​ಗೆ ಸಿ ಟಿ ರವಿ ಟಾಂಗ್

Last Updated : Feb 14, 2023, 11:34 AM IST

ABOUT THE AUTHOR

...view details