ಕರ್ನಾಟಕ

karnataka

ಶಿವಮೊಗ್ಗ ವಕೀಲರ ಸಂಘ

ETV Bharat / videos

ವಕೀಲ ಈರಣ್ಣ ಗೌಡ ಪಾಟೀಲ್​ ಹತ್ಯೆ ಖಂಡಿಸಿ ಶಿವಮೊಗ್ಗ ವಕೀಲರ ಸಂಘದಿಂದ ಪ್ರತಿಭಟನೆ - ​ ETV Bharat Karnataka

By ETV Bharat Karnataka Team

Published : Dec 8, 2023, 4:33 PM IST

ಶಿವಮೊಗ್ಗ: ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ವಕೀಲ ಈರಣ್ಣ ಗೌಡ ಪಾಟೀಲ ಹತ್ಯೆ ಖಂಡಿಸಿ, ಇಂದು ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ಪ್ರತಿಭಟನೆ ನಡೆಸಿತು. ಜಿಲ್ಲಾ ನ್ಯಾಯಾಲಯದ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಈರಣ್ಣ ಗೌಡ ಪಾಟೀಲರು ಕರ್ತವ್ಯಕ್ಕೆಂದು ಮನೆಯಿಂದ ಹೊರ ಬಂದಾಗ ಓರ್ವ ವ್ಯಕ್ತಿ ಹಾಡಹಗಲೇ ಕಾನೂನಿನ ಭಯವಿಲ್ಲದೆ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಆರೋಪಿಯನ್ನು ಕಾನೂನಿನಡಿ ಬಂಧಿಸಬೇಕು. ರಾಜ್ಯ ಸರ್ಕಾರ ತಕ್ಷಣ ವಕೀಲರ ಹಿತರಕ್ಷಣಾ ಕಾನೂನು ಜಾರಿ ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕೆಂದು ವಕೀಲರ ಸಂಘ ಆಗ್ರಹಿಸಿತು.

ಕಾನೂನು ಸಂರಕ್ಷಣೆ ಮಾಡುವ ವಕೀಲರ ಮೇಲೆ ನಡೆದ ಇಂತಹ ದೌರ್ಜನ್ಯ ಖಂಡನೀಯ. ಈ ಹಿಂದೆ ವಕೀಲರ ಪರಿಷತ್ ಮೈಸೂರಿನಲ್ಲಿ ನಡೆಸಿದ ಸಮಾವೇಶದಲ್ಲಿ ರಾಜ್ಯದ ಜನತೆಗೆ ಐದು ಗ್ಯಾರಂಟಿಯನ್ನು ನೀಡಲಾಗಿತ್ತು. ವಕೀಲರ ಸಂರಕ್ಷಣೆ ಕಾಯಿದೆ ಜಾರಿ ಮಾಡಬೇಕು. ಇಲ್ಲವಾದಲ್ಲಿ ವಕೀಲರ ಸಂಘ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದೆ ಎಂಬ ಎಚ್ಚರಿಕೆಯನ್ನು ವಕೀಲರ ಸಂಘದ ಕಾರ್ಯದರ್ಶಿ ವಿಜಯ ಕುಮಾರ್ ಎಚ್ಚರಿಸಿದರು.     

ಇದನ್ನೂ ಓದಿ:ಕಲಬುರಗಿ: ಹಾಡಹಗಲೇ ಲಾಯರ್​ ಬರ್ಬರ ಕೊಲೆ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವಕೀಲರಿಂದ ಪ್ರತಿಭಟನೆ

ABOUT THE AUTHOR

...view details