ಶಿವ 143 ಸಿನಿಮಾ ಪ್ರಚಾರ: ಗಂಗಾವತಿಯಲ್ಲಿ ನಟ ಧೀರನ್ ರಾಮ್ಕುಮಾರ್ಗೆ ಅದ್ಧೂರಿ ಸ್ವಾಗತ - ನಟ ಧೀರನ್ ರಾಮ್ಕುಮಾರ್
ಗಂಗಾವತಿ (ಕೊಪ್ಪಳ): ಶಿವ 143 ಸಿನಿಮಾ ಪ್ರಚಾರ ಸಲುವಾಗಿ ನಟ ಧೀರನ್ ರಾಮ್ಕುಮಾರ್ ಸೇರಿದಂತೆ ಚಿತ್ರತಂಡ ಗಂಗಾವತಿಗೆ ಭೇಟಿ ಕೊಟ್ಟಿದೆ. ಸಾಯಿಬಾಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಗರಕ್ಕೆ ಪ್ರವೇಶಿಸಿದ ನಟ ಧೀರನ್ ರಾಮ್ಕುಮಾರ್ಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಕೇಂದ್ರ ಬಸ್ ನಿಲ್ದಾಣದ ಸಮೀಪ ಇರುವ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಎರಡು ಜೆಸಿಬಿ ವಾಹನಗಳಿಂದ ಧೀರನ್ ರಾಮ್ಕುಮಾರ್ ಇದ್ದ ಅಲಂಕೃತ ವಾಹನದ ಮೇಲೆ ಅಭಿಮಾನಿಗಳು ಹೂವಿನ ಮಳೆಗೈದರು. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ತಮ್ಮ ನೆಚ್ಚಿನ ನಟನನ್ನು ಮೆರವಣಿಗೆ ಮಾಡಿಸಿ ಸಂಭ್ರಮಿಸಿದರು.
Last Updated : Feb 3, 2023, 8:26 PM IST