ಶಿರಸಿಯಲ್ಲಿ ನೂತನ ಶಾಸಕರ ಪ್ರಥಮ ಸಭೆಯಲ್ಲೇ ಅಧಿಕಾರಿಗಳಿಗೆ ತರಾಟೆ - ನೀರಿನ ಸಮಸ್ಯೆ
ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಪ್ರಥಮ ಬಾರಿಗೆ ಆಯ್ಕೆಯಾದ ಭೀಮಣ್ಣ ನಾಯ್ಕ ಶಾಸಕರಾದ ಬಳಿಕ 2ನೇ ದಿನವೇ ಕುಡಿಯುವ ನೀರಿನ ಕುರಿತಾಗಿ ಅಧಿಕಾರಿಗಳ ಸಭೆ ನಡೆಸಿ ಗಮನ ಸೆಳೆದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಆಡಳಿತ ಸೌಧದಲ್ಲಿ ಸಭೆ ನಡೆಸಿದ ಭೀಮಣ್ಣ ನಾಯ್ಕ, ನೀರಿನ ಸಮಸ್ಯೆ ಕುರಿತಾಗಿ ಸರಿಯಾಗಿ ಉತ್ತರಿಸದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸ್ಥಳಗಳಿಗೆ ತೆರಳಿ ಅಲ್ಲಿನ ಸಮಸ್ಯೆ ತಿಳಿದುಕೊಳ್ಳುವ ಬದಲು ಇಲ್ಲೇ ಕುಳಿತು ರಿಪೋರ್ಟ್ ನೀಡ್ತಾ ಇದ್ದೀರಿ. ಪೇಪರ್ ರಿಪೋರ್ಟ್ ಕೊಡೋ ಇಂತಹ ಅಧಿಕಾರಿಗಳಿದ್ರೆ ಮುಂದೆ ಏನಾಗುತ್ತೋ ಅನ್ನೋದು ಗೊತ್ತಿಲ್ಲ ನಂಗೆ. ಈ ರೀತಿ ಆಗಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಜನರು ಏನ್ ಹೇಳ್ತಾರೋ ಅದನ್ನ ಮೊದ್ಲು ಕೇಳಿ. ನೀರಿಗಾಗಿ ಅಥವಾ ರಸ್ತೆಗಾಗಿ ರಾಜಕಾರಣ ಮಾಡೋರು ನಾವಲ್ಲ. ವಿರೋಧ ಪಕ್ಷದವರು ಕೂಡ ಇದ್ರಲ್ಲಿ ರಾಜಕಾರಣ ಮಾಡಲ್ಲ. ನಿಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿ ಮಾನವೀಯತೆ ದೃಷ್ಟಿಯಿಂದ ಕೆಲ್ಸ ಮಾಡ್ಬೇಕು ಅಂತ ಅಧಿಕಾರಿಗಳಿಗೆ ಶಾಸಕರು ಸಲಹೆ ನೀಡಿದರು.
ಇದನ್ನೂಓದಿ:ಕಾಂಗ್ರೆಸ್ನಲ್ಲಿ ಸಿಎಂ ಆಯ್ಕೆ ಕಗ್ಗಂಟು; ಸಿದ್ದರಾಮಯ್ಯ ಪರ ದೇವರ ಮೊರೆ ಹೋದ ಕುರುಬ ಸಮುದಾಯ