ಕರ್ನಾಟಕ

karnataka

ಶಿರಸಿ ಸಬ್ ರಿಜಿಸ್ಟರ್ ಬಂಧನ

ETV Bharat / videos

ಶಿರಸಿ: ಲೋಕಾಯುಕ್ತ ಬಲೆಗೆ ಬಿದ್ದ ಸಬ್ ರಿಜಿಸ್ಟರ್ - ಶಿರಸಿ ಸಬ್ ರಿಜಿಸ್ಟರ್ ಬಂಧನ

By ETV Bharat Karnataka Team

Published : Oct 27, 2023, 7:47 PM IST

ಶಿರಸಿ : ದೇವಸ್ಥಾನದ ಸಮಿತಿಗೆ ದಾನ ನೀಡಿದ ಜಾಗವನ್ನು ನೋಂದಣಿ ಮಾಡಲು ಲಂಚ ತೆಗೆದುಕೊಳ್ಳುತ್ತಿದ್ದ ಶಿರಸಿ ಸಬ್ ರಿಜಿಸ್ಟರ್​ ಅವರನ್ನು ಕಾರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.‌ ಶಿರಸಿಯ ಸಬ್ ರಿಜಿಸ್ಟರ್ ರಾಧಮ್ಮ ಬಂಧಿತರು. 3 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ.‌

ಶಿರಸಿ ತಾಲೂಕಿನ ದಾಸನಕೊಪ್ಪದ ಬಸವರಾಜ ನಂದಿಕೇಶ್ವರಮಠ ಎಂಬವರು ತಮ್ಮ ಜಾಗವನ್ನು ಜಗಜ್ಯೋತಿ ವೀರಶೈವ ಸಮಿತಿಗೆ ದಾನವಾಗಿ ನೀಡಿದ್ದಾರೆ.‌ ಇದನ್ನು ನೋಂದಣಿ ಮಾಡಲು ಉಪ ನೋಂದಣಾಧಿಕಾರಿ ಲಂಚ ಕೇಳಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಶುಕ್ರವಾರ ಮಧ್ಯಾಹ್ನ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. "ಲಂಚ ಪಡೆದಿದ್ದು ಸಾಬೀತಾಗಿದ್ದು, ಕೈಯಲ್ಲಿ ಹಣವೂ ಬಂದಿದೆ. ಈ ಹಿಂದೆಯೂ ಆರೋಪ ಕೇಳಿ ಬಂದಿತ್ತು. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ" ಎಂದು ಲೋಕಾಯುಕ್ತ ಎಸ್ಪಿ ಕುಮಾರ್ ಚಂದ್ರ  ಮಾಹಿತಿ ನೀಡಿದರು.    

ಇದನ್ನೂ ಓದಿ :ಇ-ಸ್ವತ್ತು ಮಾಡಿಕೊಡಲು ಲಂಚ: ಪಿಡಿಒ, ಡೇಟಾ ಎಂಟ್ರಿ ಆಪರೇಟರ್ ಲೋಕಾಯುಕ್ತ ಬಲೆಗೆ

ABOUT THE AUTHOR

...view details