ಕರ್ನಾಟಕ

karnataka

ಶಿವಮೊಗ್ಗ: ಸಿಡಿದು ಬಡಿದ ಮಹಿಳೆ ಸಾವು, ತೆಂಗಿನ ಮರ ಬಿದ್ದು ಎರಡು ಕಾರು ಜಖಂ

ETV Bharat / videos

ಶಿವಮೊಗ್ಗ: ಸಿಡಿಲು ಬಡಿದು ಮಹಿಳೆ ಸಾವು... ತೆಂಗಿನ ಮರ ಬಿದ್ದು ಎರಡು ಕಾರು ಜಖಂ - Vinoba Nagar Police Station Area

By

Published : May 29, 2023, 10:02 PM IST

ಶಿವಮೊಗ್ಗ: ಸಂಜೆ ಏಕಾಏಕಿ ಸುರಿದ ಭಾರಿ ಗಾಳಿ - ಮಳೆಗೆ ತೆಂಗಿನ ಮರವೊಂದು ಬುಡ ಸಮೇತ ಎರಡು ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಬಿದ್ದಿರುವ ಕಾರಣ ಎರಡು ಕಾರುಗಳು ಜಖಂಗೊಂಡ ಘಟನೆ ನಗರದ ಸಾಧನ ಕಣ್ಣಿನ ಆಸ್ಪತ್ರೆ ಬಳಿ ನಡೆದಿದೆ. ಹೊಸ ಕಾರೊಂದು ಸಂಪೂರ್ಣ ನಜ್ಜುಗುಜ್ಜಾಗಿದೆ. 

ರಸ್ತೆ ಮಧ್ಯದಲ್ಲೇ ಮರ ಬಿದ್ದಿರುವ ಕಾರಣ ದುರ್ಗಿಗುಡಿ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಟ್ರಾಫಿಕ್​ ಕ್ಲಿಯರ್​​ ಮಾಡಿದರು ಕಾರು ಜಖಂಗೊಂಡಿರುವುದನ್ನು ನೋಡಲು ನೂರಾರು ಜನ ಸೇರಿದ್ದರು. ಮರ ಬಿದ್ದಿರುವ ರಭಸಕ್ಕೆ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸಿಡಿಲು ಬಡಿದು ಮಹಿಳೆ ಸಾವು:ಸಂಜೆ ಸುರಿದ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಠಿಸಿದ್ದು, ಕುರಿಗಳಿಗೆ ಮೇವು ತರಲು ಹೋದಾಗ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿರುವ ಘಟನೆ ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಶ್ರಯ ಬಡಾವಣೆಯ ನಿವಾಸಿ ಲಕ್ಷ್ಮೀ ಬಾಯಿ (28) ಮೃತ ದುರ್ದೈವಿ. ಸ್ಥಳಕ್ಕೆ ವಿನೋಬ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಪ್ರವಾಸಕ್ಕೆ ತೆರಳಿದ್ದ ಮೂರು ಕುಟುಂಬಗಳ ಬದುಕಿನ ಪಯಣ ಅಂತ್ಯ: ಮೈಸೂರು ಭೀಕರ ಅಪಘಾತದ ಕೊನೆ ಕ್ಷಣದ ವಿಡಿಯೋ!

ABOUT THE AUTHOR

...view details