ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಿ ದೇಗುಲದಲ್ಲಿ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ.. - Bhuvaneshwari devi
Published : Nov 1, 2023, 10:55 PM IST
|Updated : Nov 2, 2023, 7:10 AM IST
ಶಿವಮೊಗ್ಗ: ರಾಜ್ಯಾದ್ಯಂತ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ನಾಮಕರಣಗೊಂಡು 50 ವರ್ಷಗಳು ಗತಿಸಿವೆ. ಇಂದು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಾಡಿನ ಪ್ರಸಿದ್ದ ಸಿಂಗದೂರಿನ ಚೌಡೇಶ್ವರಿ ತಾಯಿಗೆ ಕನ್ನಡ ಬಾವುಟ ಹೊದಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು..
ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಗ್ರಾಮದಲ್ಲಿ ನೆಲೆಸಿರುವ ಚೌಡೇಶ್ವರಿ ದೇವಿಗೆ ನಿತ್ಯ ವಿವಿಧ ಪೂಜೆ ನಡೆಸುವುದು ಸಂಪ್ರದಾಯ. ಆದರೆ, ಇಂದು ಕನ್ನಡ ರಾಜ್ಯೋತ್ಸವದ ನಿಮಿತ್ತ ಚೌಡೇಶ್ವರಿ ತಾಯಿಗೆ ಕನ್ನಡದ ಕೆಂಪು- ಹಳದಿ ಬಣ್ಣದ ಕನ್ನಡ ಬಾವುಟ ಹಾಕಿ ಪೂಜೆ ನಡೆಸಲಾಯಿತು.
ನಂತರ ದೇವಾಲಯದ ಆವರಣದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಈ ವೇಳೆ, ದೇವಾಲಯದ ಧರ್ಮದರ್ಶಿಗಳಾದ ಡಾ.ರಾಮಪ್ಪನವರು ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿದರು. ಸಿಗಂದೂರು ಚೌಡೇಶ್ವರಿ ದೇವಿಗೆ ನಿತ್ಯ ಪೂಜೆ ಸಲ್ಲಿಸುವ ತರಹ ಭುವನೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಮಾಡಿದರು.
ವರ್ಷವಿಡೀ ವಿಶೇಷ ಕಾಯಕ್ರಮ: ಮೈಸೂರು ರಾಜ್ಯ 1973ರ ಅಕ್ಟೋಬರ್ 20ರಂದು ಕರ್ನಾಟಕ ಎಂದು ಮರು ನಾಮಕರಣಗೊಂಡಿದ್ದು 50 ವರ್ಷ ಪೂರೈಸಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ವರ್ಷವಿಡೀ ಆಯೋಜಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇದನ್ನೂಓದಿ:ಮೈಗೆ ಹಳದಿ, ಕೆಂಪು ಬಣ್ಣ ಬಳಿದುಕೊಂಡು ರಾಜ್ಯೋತ್ಸವ ಆಚರಿಸಿದ ದಾವಣಗೆರೆಯ ರಕ್ತದಾನಿ: ವಿಡಿಯೋ