ಕೋಡಿ ಒಡೆದ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ - ಈಟಿವಿ ಭಾರತ್ ಕನ್ನಡ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎಂದೇ ಪ್ರಖ್ಯಾತಿ ಹೊಂದಿರುವ ಶಾಂತಿಸಾಗರ (ಸೂಳೆಕೆರೆ) ಕೆರೆ ಕೋಡಿ ಬಿದ್ದಿದೆ. ಜನ, ಜಾನುವಾರುಗಳು ಕೆರೆ ಬಳಿ ತೆರಳದಂತೆ ಕರ್ನಾಟಕ ನೀರಾವರಿ ನಿಗಮ ಭದ್ರಾ ನಾಲಾ ಉಪ ವಿಭಾಗದಿಂದ ಆದೇಶ ಹೊರಡಿಸಲಾಗಿದೆ. ಚನ್ನಗಿರಿ ಹಾಗೂ ಮಲೆನಾಡು ಭಾಗದಲ್ಲಿ ನಿರಂತರ ಮಳೆ ಸುರಿದಿದ್ದರಿಂದ ಭದ್ರ ನಾಲೆಯಿಂದ ಹೆಚ್ಚು ನೀರು ಕೆರೆಗೆ ಬರುತಿದ್ದು ಶಾಂತಿಸಾಗರ ತುಂಬಿದೆ. ಕೆರೆಯ ಸುತ್ತಮುತ್ತಲಿನ ಜಮೀನು ಮುಳುಗಡೆಯಾಗಿವೆ.
Last Updated : Feb 3, 2023, 8:26 PM IST