ವಾರಣಾಸಿಯಲ್ಲಿ ಶಂಕರ್ ಮಹಾದೇವನ್ ಗಾನಸುಧೆ- ವಿಡಿಯೋ - ಶಂಕರ್ ಮಹಾದೇವನ್ ಹಾಡುಗಳು
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾಶಿಯಿಂದ ಜಗತ್ತಿನ ಅತಿ ಉದ್ದನೆಯ ಮತ್ತು ಐಷಾರಾಮಿ ಹಡಗು ಗಂಗಾ ವಿಲಾಸ್ ಉದ್ಘಾಟನೆ ಮಾಡಲಿದ್ದಾರೆ. 'ಗಂಗಾ ವಿಲಾಸ್ ಕ್ರೂಸ್' ಪ್ರಾರಂಭಿಸುವ ಮುನ್ನಾದಿನ ನಿನ್ನೆ ವಾರಣಾಸಿಯ ವಿಶ್ವನಾಥ ಧಾಮದಲ್ಲಿ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇಶದ ಹೆಸರಾಂತ ಗಾಯಕ, ಸಂಗೀತ ಸಂಯೋಜಕ ಮತ್ತು ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ಅವರು ಮನರಂಜನೆಯ ರಸದೌತಣ ಉಣಬಡಿಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರೂ ಶಂಕರ್ ಮಹದೇವನ್ ಗಾನಸುಧೆ ಆನಂದಿಸಿದರು.