ಶಾಮನೂರು ಶಿವಶಂಕರಪ್ಪ, ಎಸ್.ಎಸ್ ಮಲ್ಲಿಕಾರ್ಜುನ್‌ಗೆ ಗೆಲುವು.. ಹರಕೆ ತೀರಿಸಿದ ಅಭಿಮಾನಿಗಳು - SS Mallikarjun
ದಾವಣಗೆರೆ : ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಹಾಗು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ
ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಅಪ್ಪ ಮತ್ತು ಮಗ ಇಬ್ಬರೂ ಗೆಲುವು ಸಾಧಿಸಲಿ ಎಂದು ಅಭಿಮಾನಿಗಳು ನಗರ ದೇವತೆ ದುರ್ಗಾಂಭಿಕಾ ದೇವಿಗೆ ಚುನಾವಣೆ ವೇಳೆ ಹರಕೆ ಕೂಡ ಕಟ್ಟಿಕೊಂಡಿದ್ದರು. ಇದೀಗ ಇಬ್ಬರು ಗೆಲುವು ಸಾಧಿಸಿದ್ದರಿಂದ ಇಡೀ ಅಭಿಮಾನಿಗಳ ವರ್ಗ ಸೇರಿ ಹರಕೆ ತೀರಿಸಿದ್ದಾರೆ.
ಇಂದು ದಾವಣಗೆರೆಯ ದುರ್ಗಾಂಭಿಕಾ ದೇವಿಗೆ 101 ತೆಂಗಿನಕಾಯಿ ಒಡೆದು ಅಭಿಮಾನಿಗಳು ಹರಕೆ ತೀರಿಸಿದರು. ಇದಲ್ಲದೆ ಈ ವೇಳೆ ಶಾಮನೂರು ಶಿವಶಂಕರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯ ಮಾಡಿದರು. ದಶಕಗಳ ಕಾಲ ಕಾಂಗ್ರೆಸ್ನಲ್ಲಿ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಅದ್ದರಿಂದ ಅವರಿಗೆ ಡಿಸಿಎಂ ಇಲ್ಲ ಸಿಎಂ ಸ್ಥಾನ ಕೊಡಬೇಕೆಂದು ಆಗ್ರಹಿಸಿದರು. ಮತ್ತೊಂದೆಡೆ ವೀರಶೈವ ಲಿಂಗಾಯತ ಮಹಾಸಭಾದಿಂದ ಈ ಕೂಗು ಕೇಳಿ ಬರುತ್ತಿದ್ದು, ವರಿಷ್ಠರಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ :ಸಿಎಂ ಆಯ್ಕೆ ಬಿಕ್ಕಟ್ಟು: ದೆಹಲಿಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್